ಹೊಸಕನ್ನಡ ನ್ಯೂಸ್, ಮಂಗಳೂರು: ಮೊಬೈಲ್ ನಲ್ಲಿ ಸೇವ್ ಆಗಿರುವ ಒಂದೆರಡು ಆಟೋ ಅಥವಾ ಕ್ಯಾಬ್ ಚಾಲಕರ ನಂಬರ್ ಗಳು ಕನೆಕ್ಟ್ ಆಗದ ಸಂದರ್ಭದಲ್ಲಿ ಮತ್ತು ಎಲ್ಲಿ ಬೇಕಾದಲ್ಲಿ ತಕ್ಷಣಕ್ಕೆ ಕರಾವಳಿ ಜಿಲ್ಲೆಯಾದ್ಯಂತ ಹಳ್ಳಿಮೂಲೆಗಳಲ್ಲಿ ಕೂಡಾ ಕ್ಯಾಬ್, ಕಾರು ಆಟೋ ಹಿಡಿಯಬೇಕಾದ ಸಂದರ್ಭದಲ್ಲಿ ನಮ್ಮೂರಲ್ಲೂ ಬೆಂಗಳೂರಿನಲ್ಲಿ ಓಲಾ ಉಬರ್ ಮಾದರಿಯಲ್ಲಿ ಒಂದು ಆಪ್ ಆಧಾರಿತ ವ್ಯವಸ್ಥೆ ಇದ್ದಿದ್ದರೆ ಎಷ್ಟು ಚೆಂದ ಎಂದು ನಾವು ಅಂದುಕೊಂಡಿದ್ದೇವಲ್ಲ? ಆ ಅನಿಸಿಕೆ ಈಗ ನಿಜವಾಗಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಉಡುಪಿ ವ್ಯಾಪ್ತಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಆಪ್ ಆಧಾರಿತ ಕ್ಯಾಬ್ ಆಟೋ ಬುಕಿಂಗ್ ವ್ಯವಸ್ಥೆಯೊಂದು ಕಾರ್ಯಾಚರಣೆ ಶುರುಮಾಡಿದೆ. ಕರಾವಳಿಯಲ್ಲಿ ಮಾಂಗೋರೈಡ್ ಕಲರವ ಸೃಷ್ಟಿಸಿದೆ. ಆಶ್ಚರ್ಯ ಮತ್ತು ಅದೃಷ್ಟ ಏನೆಂದರೆ ನಮ್ಮೂರಿನ ಹಳ್ಳಿಯ ಪ್ರತಿಭಾನ್ವಿತ ಯುವಕರೇ ಈ ಆ್ಯಪ್ ನಿರ್ಮಿಸಿ ಸ್ಟಾರ್ಟ್ ಆ್ಯಪ್ ಶುರು ಮಾಡಿರೋದು.
ಇಲ್ಲಿಯ ತನಕ ಮಹಾನಗರಗಳಲ್ಲಿ ಮಾತ್ರ ದೊರೆಯುತ್ತಿರುವ ಆ್ಯಪ್ ಆಧಾರಿತ ಸೌಲಭ್ಯ ದಕ್ಷಿಣ ಕನ್ನಡ, ಉಡುಪಿಯ ಮತ್ತು ಆಸುಪಾಸಿನ ಹಳ್ಳಿ ಹಳ್ಳಿಗಳಲ್ಲಿ ಸಿಗಬೇಕು ಅನ್ನೋದರ ಫಲವೇ ಈ ಮಾಂಗೋರೈಡ್!
ಮಾಂಗೋರೈಡ್ (MongoRide) ಎನ್ನುವ ಈ ಆ್ಯಪ್ ಆಧಾರಿತ ವ್ಯವಸ್ಥೆ ಇದೀಗ ಗೂಗಲ್ ಪ್ಲೇ ಸ್ಟೋರ್ ನಿಂದ ಭಾರೀ ಪ್ರಮಾಣದಲ್ಲಿ ಡೌನ್ಲೋಡ್ ಆಗುತ್ತಿದ್ದು ಕ್ಷಿಪ್ರ, ಸುರಕ್ಷಿತ ಮತ್ತು ಅತ್ಯಂತ ಕಡಿಮೆ ಬೆಲೆಯ ಸಂಚಾರ ಬಯಸುವ ಗ್ರಾಹಕರಿಗೆ ವರದಾನವಾಗಿದೆ. ಮಾಂಗೋರೈಡ್ (MongoRide)ನಿಂದ ಲಾಭ ಯಾರಿಗೆ?
*ಕಡಿಮೆ ಬೆಲೆಯಲ್ಲಿ ಪ್ರಯಾಣ ಸಾಧ್ಯ, ಗ್ರಾಹಕ ಸ್ನೇಹಿ ಪ್ರಯಾಣ ವೆಚ್ಚ
*ಸಮಯದ ಭಾರೀ ಉಳಿತಾಯ, ಕೆಲವೇ ನಿಮಿಷಗಳಲ್ಲಿ ಆಟೋರಿಕ್ಷಾ ಅಥವಾ ಕ್ಯಾಬ್ ಬುಕ್ ಮಾಡಿದ ಜಾಗಕ್ಕೆ ವಾಹನ ಸೌಲಭ್ಯ
*ನಮ್ಮೂರಿನ ರಿಕ್ಷಾ ಚಾಲಕರಿಗೆ, ಹಳ್ಳಿಹಳ್ಳಿಯಲ್ಲಿ ಕೇವಲ ಕ್ಯೂನಲ್ಲಿ ನಿಂತು ಬಾಡಿಗೆಗೆ ಟ್ರಿಪ್ ಹೊಡೆಯುವ ಚಾಲಕರಿಗೆ ಮತ್ತು ಕೆಲವೆಡೆ ತಮ್ಮದೇ ಸೀಮಿತ – ಸ್ವಂತ ಕಾಂಟಾಕ್ಟ್ ಮೂಲಕ ಬಾಡಿಗೆಗೆ ಹೋಗುವ ರಿಕ್ಷಾ ಕ್ಯಾಬ್ ಚಾಲಕರು ಈ ವ್ಯವಸ್ಥೆಯಿಂದ ದೊಡ್ಡ ಮಟ್ಟದಲ್ಲಿ ಲಾಭ ಪಡೆದುಕೊಳ್ಳುತ್ತಾರೆ.
*ಹಳ್ಳಿಯಲ್ಲಿ ಕೂಡಾ ಈ ಆಪ್ ಆಧಾರಿತ ಸೇವೆಯ ಸಿಗುವ ಕಾರಣದಿಂದ ಹಳ್ಳಿಗಳಲ್ಲಿ ಒಂದು ರೀತಿಯಲ್ಲಿ ಎಕಾನಮಿ ಬೆಳೆಯಲು ಸಹಾಯವಾಗುತ್ತದೆ.
ಆಟೋ, ಕ್ಯಾಬ್ ಅಲ್ಲದೆ, ಪಾರ್ಸೆಲ್ ಸಾಗಿಸಲು ಅಥವಾ ಸ್ವೀಕರಿಸಲು ಕೂಡಾ ಈ ಆ್ಯಪ್ ಉತ್ತಮವಾಗಿದೆ. ದ್ವಿಚಕ್ರ ಚಾಲಕರು, ಜನಸಾಮಾನ್ಯರು ಹಾಗೂ ಸಣ್ಣ ವ್ಯಾಪಾರಸ್ಥರು ಇದರ ಸದುಪಯೋಗವನ್ನು ಪಡೆಯಬಹುದಾಗಿದೆ.
ಇದಲ್ಲದೇ, ಯಾವುದೇ ಸರಕು ಸಾಗಾಣಿಕೆಗಳಿಗೆ ಗೂಡ್ಸ್ ವಾಹನಗಳನ್ನು ಸಹ ಬುಕ್ ಮಾಡಬಹುದಾಗಿದೆ.
*ಮಲ್ಟಿ ನ್ಯಾಷನಲ್ ಕಂಪನಿಗಳ ಬದಲಿಗೆ ಹಳ್ಳಿ ಹುಡುಗರ ಸ್ಟಾರ್ಟಪ್ ಉದ್ಯಮಕ್ಕೆ ನೆರವಾಗುತ್ತದೆ.
*ಹಳ್ಳಿ ಮತ್ತು ದೂರದ ಪ್ರದೇಶಗಳಲ್ಲಿ ವಾಸಿಸುವ ಸುರಕ್ಷತೆ ಬಗ್ಗೆ ಹೆಚ್ಚು ಗಮನ ಹರಿಸುವ ಮಹಿಳೆಯರು ಮಾಂಗೋರೈಡ್ (MongoRide) ಸೇವೆಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
ಸುರಕ್ಷತೆ ದೃಷ್ಟಿಯಿಂದ ಈ ಆ್ಯಪ್ ನಲ್ಲಿ SOS ವ್ಯವಸ್ಥೆ, ಗ್ರಾಹಕರ ಎಮರ್ಜೆನ್ಸಿ ಕಾಂಟ್ಯಾಕ್ಟ್ಸ್ ಹಾಗೂ ಪೇರೆಂಟ್ ಕಂಟ್ರೋಲ್ ಟ್ರಿಪ್ ಟ್ರ್ಯಾಕಿಂಗ್ ಸಿಸ್ಟಮ್ ಗಳನ್ನು ಅಳವಡಿಸಲಾಗಿದೆ.
ಈಗ ಬೆಂಗಳೂರು ಸೇರಿ ದಕ್ಷಿಣಕನ್ನಡ, ಉಡುಪಿ ಇತ್ಯಾದಿ ಭಾಗದಲ್ಲಿ ಈ ಆಪ್ ಆಧಾರಿತ ಈ ಸೇವೆಯು ಇದೀಗಲೇ ನಡೆಯುತ್ತಿದ್ದು, ಒಟ್ಟಾರೆ ಸ್ಥಳೀಯ ಸಂಚಾರ ವ್ಯವಸ್ಥೆಯ ಮೇಲೆ ಉತ್ತಮ ಪ್ರಭಾವ ಬೀರುವುದರಲ್ಲಿ ಅನುಮಾನವಿಲ್ಲ.
ಟೆಕ್ನಾಲಜಿ, ಕೇವಲ ಬೆಂಗಳೂರು ಮುಂತಾದ ಮಹಾನಗರಗಳಿಗೆ ಮಾತ್ರ ಸೀಮಿತವಲ್ಲ. ಪ್ರತಿಭೆಗಳು ನಮ್ಮಲ್ಲೂ ಇದ್ದಾರೆ, ಆಧುನಿಕ ತಂತ್ರಜ್ಞಾನವನ್ನು ಸೌಲಭ್ಯವಾಗಿಸಿ ನಮ್ಮೂರಿನ ಹಳ್ಳಿಹಳ್ಳಿಗೂ ವಿಸ್ತರಿಸಬೇಕು ಅನ್ನೋ ಆಶಯದೊಂದಿಗೆ ಶುರುವಾದ ಯೋಚನೆಯೇ ಮಾಂಗೋರೈಡ್ (MongoRide). ಇದು ನಮ್ಮ ಊರಿನ ಸಂಚಾರ ವ್ಯವಸ್ಥೆ- ಪ್ರವೀಣ್, ಸಿಇಓ, ಮಾಂಗೋರೈಡ್
ಗ್ರಾಹಕರು ಮಾಂಗೋರೈಡ್ (MongoRide) ಡೌನ್ಲೋಡ್ ಮಾಡಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ. (App PlayStore ನಲ್ಲಿ ಲಭ್ಯ)
User App ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ:
https://play.google.com/store/apps/details?id=com.mongoride.user
Driver/Captain App ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ:
https://play.google.com/store/apps/details?id=com.mongoride.driver
ಹೆಚ್ಚಿನ ವಿವರ:
ಈ ಸೌಲಭ್ಯವು ಇದು ಹಳ್ಳಿ-ಹಳ್ಳಿಯಲ್ಲೂ ಲಭ್ಯವಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ನಮ್ಮ ಗ್ರಾಹಕ ಸಿಬ್ಬಂದಿಯನ್ನು ಸಂಪರ್ಕಿಸಿ ಅಥವಾ ವಾಟ್ಸಾಪ್ ಮಾಡಿ 8748022728
ತುಳು, ಕನ್ನಡ, Hindi ಹಾಗೂ English ಭಾಷೆಯಲ್ಲಿ ಲಭ್ಯವಿದೆ. ವಾಟ್ಸಾಪ್ ಮೂಲಕ ಎಲ್ಲಾ ವಿವರಗಳನ್ನು ಗ್ರಾಹಕರಿಗೆ ತಲುಪಿಸಲಾಗಿ, ನಿಮಗೆ ಬೇಕಾದ ಆಯ್ಕೆ ಮಾಡಿಕೊಳ್ಳಬಹುದು.
