Home » Mangalore: ದಕ್ಷಿಣಕನ್ನಡ ಜಿಲ್ಲಾ ಬಿಜೆಪಿ ನೂತನ ಪದಾಧಿಕಾರಿಗಳ ಘೋಷಣೆ

Mangalore: ದಕ್ಷಿಣಕನ್ನಡ ಜಿಲ್ಲಾ ಬಿಜೆಪಿ ನೂತನ ಪದಾಧಿಕಾರಿಗಳ ಘೋಷಣೆ

0 comments

Mangalore: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರ ಅನುಮೋದನೆಯೊಂದಿಗೆ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಅವರು 2026ನೇ ಸಾಲಿನ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಪ್ರಕಟಿಸಿದ್ದಾರೆ.

2024ರ ಪಟ್ಟಿಗೆ ಹೋಲಿಸಿದರೆ ಈ ಬಾರಿ ಪದಾಧಿಕಾರಿಗಳ ಸಂಖ್ಯೆಯನ್ನು 20ರಿಂದ 23ಕ್ಕೆ ಏರಿಸಲಾಗಿದ್ದು, ಸಂಘಟನೆಯಲ್ಲಿ ಹಲವು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ.

ಪ್ರಸನ್ನ ಮಾರ್ತಾ, ಕವಿತಾ ಸನಿಲ್ ಜತೆ ಜಯಂತ್ ಕೋಟ್ಯಾನ್ ಸುನೀಲ್ ಆಳ್ವ, ಜಿ. ಪೂಜಾ ಪ್ರಶಾಂತ್ ಪೈ. ರವೀಂದ್ರ ಶೆಟ್ಟಿ ಉಳಿದೊಟ್ಟು, ಶಾಂತಿಪ್ರಸಾದ್‌ ಹೆಗ್ಡೆ. ರಾಕೇಶ್ ರೈ ಕೆಡಂಜಿ ಹಾಗೂ ತಿಲಕರಾಜ್‌ ಕೃಷ್ಣಾಪುರ ಅವರು ಉಪಾಧ್ಯಕ್ಷರಾಗಿ ಮುಂದುವರಿದಿದ್ದಾರೆ. ಪಕ್ಷದ ಪ್ರಮುಖ ಜವಾಬ್ದಾರಿಯಾದ ಪ್ರಧಾನ ಕಾರ್ಯದರ್ಶಿ ಸ್ಥಾನದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಪ್ರೇಮಾನಂದ ಶೆಟ್ಟಿ. ಯತೀಶ್‌ ಅರ್ವಾ‌ರ್ ಮತ್ತು ಎಂಎಲ್ಸಿ ಕಿಶೋರ್ ಕುಮಾ‌ರ್ ಪಿ. ಅವರು ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವ ಮೂಲಕ ಸಂಘಟನಾತ್ಮಕ ಸ್ಥಿರತೆಯನ್ನು ಕಾಯ್ದುಕೊಂಡಿದ್ದಾರೆ. ಕಿಶೋರ್ ಕುಮಾರ್ ಅವರು ವಿಧಾನ ಪರಿಷತ್ ಗೆ ಆಯ್ಕೆಯಾಗಿರುವ ಹಿನ್ನಲೆಯಲ್ಲಿ ಅವರ ಸ್ಥಾನಕ್ಕೆ ಹೊಸ ಆಯ್ಕೆ ನಡೆಯಬಹುದೆಂಬ ಲೆಕ್ಕಚಾರ ರಾಜಕೀಯ ವಲಯದಲ್ಲಿ ನಡೆಯುತಿತ್ತು.

ಒಟ್ಟು 9 ಮಂದಿ ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗಿದ್ದು. ಇದರಲ್ಲಿ ಧನಲಕ್ಷ್ಮಿಗಟ್ಟಿ. ಪುಷ್ಪ ಮೇದಪ್ಪ, ಸುಜಿತ್‌ ಪ್ರತಾಪ್ ಮತ್ತು ಶೋಭೇಂದ್ರ ಸಸಿಹಿತ್ತು ಅವರು ಹೊಸದಾಗಿ ಆಯ್ಕೆಯಾಗಿದ್ದಾರೆ. ಹಳೆಯ ಪಟ್ಟಿಯಲ್ಲಿದ್ದ ವಿನಯ್ ಮುತ್ತುಮುಡಿ, ಸೀತಾರಾಂ ಬೆಲಾಲ್ ಮತ್ತು ಕವಿತಾ ದಿನೇಶ್ ಅವರು ಈ ಬಾರಿ ಸ್ಥಾನ ಕಳೆದುಕೊಂಡಿದ್ದಾರೆ. ದೇವಪ್ಪ ಪೂಜಾರಿ, ದಿನೇಶ್‌ ಅಮ್ಮೂರು, ಪೂರ್ಣಿಮಾ ಎಂ.. ವಸಂತಿ ಮಚ್ಚಿನ ಮತ್ತು ವಿದ್ಯಾ ಗೌರಿ ಅವರು ಕಾರ್ಯದರ್ಶಿಗಳಾಗಿ ಮುಂದುವರಿದಿದ್ದಾರೆಸಂಜಯ್ ಪ್ರಭು ಅವರು ಜಿಲ್ಲಾ ಕೋಶಾಧಿಕಾರಿಯಾಗಿ ಮುಂದುವರಿದಿದ್ದಾರೆ. ಕಾರ್ಯಾಲಯ ಕಾರ್ಯದರ್ಶಿ ಜವಾಬ್ದಾರಿಯನ್ನು ಅರವಿಂದ ಶೇಣೈ ಅವರ ಬದಲಿಗೆ ಗುರುಚರಣ್‌ ಅವರಿಗೆ ವಹಿಸಲಾಗಿದೆ.

ಪಕ್ಷದ ಹಳೆಯ ಮತ್ತು ನಿಷ್ಠಾವಂತ ಕಾರ್ಯಕರ್ತರನ್ನು ಉಳಿಸಿಕೊಳ್ಳುವ ಜೊತೆಗೆ, ಇತ್ತೀಚೆಗೆ ಪಕ್ಷಕ್ಕೆ ಸೇರ್ಪಡೆಯಾದ ಪ್ರಭಾವಿ ನಾಯಕರಿಗೂ ಆದ್ಯತೆ ನೀಡಲಾಗಿದೆ. ಮಹಿಳಾ ಪದಾಧಿಕಾರಿಗಳ ಸಂಖ್ಯೆಯಲ್ಲಿನ ಹೆಚ್ಚಳವು ಮುಂದಿನ ಚುನಾವಣೆಗಳ ದೃಷ್ಟಿಯಿಂದ ಮಹಿಳಾ ಸಂಘಟನೆಯನ್ನು ಬಲಪಡಿಸುವ ಸೂಚನೆಯಾಗಿದೆ.

You may also like