Home » Mangalore: ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣ: ಎಸ್‌ಐಟಿ ತಂಡಕ್ಕೆ ಹೆಚ್ಚುವರಿ 20 ಅಧಿಕಾರಿಗಳ ನೇಮಕ

Mangalore: ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣ: ಎಸ್‌ಐಟಿ ತಂಡಕ್ಕೆ ಹೆಚ್ಚುವರಿ 20 ಅಧಿಕಾರಿಗಳ ನೇಮಕ

0 comments

Mangalore: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರಕಾರ ಎಸ್‌ಐಟಿ ರಚನೆ ಮಾಡಿದ್ದು, ಈ ತಂಡಕ್ಕೆ ಇದೀಗ ಹೆಚ್ಚುವರಿ 20 ಅಧಿಕಾರಿಗಳ ನೇಮಕ ಮಾಡಿ ಆದೇಶ ಹೊರಡಿಸಿರುವ ಕುರಿತು ವರಿದಿಯಾಗಿದೆ.

ಈ ಕುರಿತು ರಾಜ್ಯ ಡಿಜಿಪಿ ಆದೇಶ ಹೊರಡಿಸಿದ್ದಾರೆ. ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣದ ತನಿಖೆಗೆಂದು ರಚನೆ ಮಾಡಿದ್ದ ಎಸ್‌ಐಟಿ ತಂಡಕ್ಕೆ 20 ಹೆಚ್ಚುವರಿ ಅಧಿಕಾರಿಗಳ ನಿಯೋಜನೆ ಮಾಡಲಾಗಿದೆ. ಈ ತಂಡ ಪ್ರಣವ್‌ ಮೊಹಾಂತಿ ನೇತೃತ್ವದಲ್ಲಿ ತನಿಖೆ ಮಾಡಲಿದೆ.

ಹೆಚ್ಚುವರಿಯಾಗಿ ನೇಮಕಗೊಂಡಿರುವ ಅಧಿಕಾರಿಗಳಲ್ಲಿ, ಮಂಗಳೂರು ಡಿಸಿಆರ್‌ಇ ಎಸ್ಪಿ ಸಿ.ಎ ಸೈಮನ್, ಉಡುಪಿ ಸಿಎಎನ್ ಠಾಣೆಯ ಡಿಎಸ್‌ಪಿ, ಎ.ಸಿ ಲೋಕೇಶ್, ದಕ್ಷಿಣ ಕನ್ನಡ ಸಿಇಎನ್ ಠಾಣೆಯ ಡಿಎಸ್‌ಪಿ ಮಂಜುನಾಥ್, ಸಿಎಸ್‌ಪಿ ಪೊಲೀಸ್ ಇನ್ಸ್‌ಪೆಕ್ಟರ್‌ ಮಂಜುನಾಥ್, ಸಿಎಸ್‌ಪಿ ಇನ್ಸ್‌ಪೆಕ್ಟರ್‌ ಇ.ಸಿ ಸಂಪತ್, ಸಿಎಸ್‌ಪಿ ಪೊಲೀಸ್ ಇನ್ಸ್‌ಪೆಕ್ಟರ್‌ ಕೆ.ಕುಸುಮಧರ್, ಉತ್ತರ ಕನ್ನಡದ ಶಿರಸಿ ಗ್ರಾಮಾಂತರ ಪೊಲೀಸ್ ಇನ್ಸ್‌ಪೆಕ್ಟರ್‌ ಮಂಜುನಾಥ ಗೌಡ, ಉಡುಪಿ, ಬೈಂದೂರು ಇನ್ಸ್‌ಪೆಕ್ಟರ್‌ ಪಿ.ಡಿ ಸವಿತ್ರು ತೇಜ್, ಸಿಎಸ್‌ಪಿ ಸಬ್‌ಇನ್ಸ್‌ಪೆಕ್ಟರ್‌ ಕೋಕಿಲ ನಾಯಕ್, ಸಿಎಸ್‌ಪಿ ಸಬ್‌ಇನ್ಸ್‌ಪೆಕ್ಟರ್‌ ವೈಲೆಟ್ ಫೆಮಿನಾ, ಸಿಎಸ್‌ಪಿ ಸಬ್‌ಇನ್ಸ್‌ಪೆಕ್ಟರ್‌ ಶಿವ ಶಂಕರ್, ಉತ್ತರ ಕನ್ನಡ, ಶಿರಸಿ ಎನ್.ಎಂ. ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್‌ ರಾಜ್‌ಕುಮಾರ್ ಉಕ್ಕಳ್ಳಿ, ಉತ್ತರ ಕನ್ನಡ ಆಂಕೋಲ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್‌ ಆರ್.ಸುಹಾಸ್, ಉತ್ತರ ಕನ್ನಡ ಮುಂಡಗೋಡು ಸಬ್‌ಇನ್ಸ್‌ಪೆಕ್ಟರ್‌ ವಿನೋದ್ ಎಸ್. ಕಾಳಪ್ಪನವರ್, ಮಂಗಳೂರು ಮೆಸ್ಕಾಂ ಸಬ್‌ಇನ್ಸ್‌ಪೆಕ್ಟರ್‌ ಜೆ.ಗುಣಪಾಲ್, ಉಡುಪಿ ನಗರ ಪೊಲೀಸ್ ಠಾಣೆಯ ಎಎಸ್‌ಐ ಸುಭಾಷ್ ಕಾಮತ್, ಉಡುಪಿ ಕಾಪು ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಹರೀಶ್‌ಬಾಬು, ಉಡುಪಿ ಮಲ್ಪೆ ಸರ್ಕಲ್ ಕಚೇರಿಯ ಹೆಡ್‌ಕಾನ್‌ಸ್ಟೇಬಲ್ ಪ್ರಕಾಶ್, ಉಡುಪಿ ಕುಂದಾಪುರನಗರ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ನಾಗರಾಜ್ ಮತ್ತು ಚಿಕ್ಕಮಗಳೂರಿನ ಎಫ್‌ಎಂಎಸ್ ಹೆಡ್‌ಕಾನ್‌ಸ್ಟೇಬಲ್ ದೇವರಾಜ್ ಅವರ ಹೆಸರುಗಳನ್ನು ಉಲ್ಲೇಖಿಸಿದ್ದಾರೆ.

You may also like