Mangaluru: ಜೈ ತುಳುನಾಡ್ (ರಿ.) ಬೆಂಗಳೂರು ಘಟಕದ ವಾರ್ಷಿಕ ಸಾಮಾನ್ಯ ಸಭೆ ಹಾಗೂ 2025-26 ನೇ ಸಾಲಿನ ಹೊಸ ಸಮಿತಿಯ ಪದಗ್ರಹಣ ಕಾರ್ಯಕ್ರಮದಲ್ಲಿ ಅಧಿಕಾರ ವರ್ಗಾವಣೆ ನಡೆಯಿತು.
ಆ ಕಾರ್ಯಕ್ರಮದಲ್ಲಿ ಶ್ರೀ ನಿಶಿಲ್ ಶೆಟ್ಟಿ ಬೇಲಾಡಿ, ಶ್ರೀ ಶರತ್ ಕೊಡವೂರು, ಹಾಗೆಯೇ ಮಾಜಿ ಅಧ್ಯಕ್ಷರಾದ ಶ್ರೀ ಜಯಪ್ರಸಾದ್ ಕುಲಾಲ್ ತುಲುನಾಡ್ ಭಾಗವಹಿಸಿದ್ದರು. ಮೊದಲು 2024-25ನೇ ಸಾಲಿನ ಎಲ್ಲಾ ಪದಾಧಿಕಾರಿಗಳು ತನ್ನ ಅಧಿಕಾರದ ಅವಧಿಯ ಅನುಭವಗಳನ್ನು ಹಂಚಿಕೊಂಡರು. ತುಳು ಸಾಲು ಮತ್ತು ಬಾವುಟ ಕೊಡುವ ಮೂಲಕ 2025-26 ನೇ ಸಾಲಿನ ಹೊಸ ಸಮಿತಿಗೆ ಅಧಿಕಾರ ಪದಗ್ರಹಣ ಕಾರ್ಯಕ್ರಮ ನಡೆಯಿತು.
ಹೊಸ ಸಮಿತಿಯ ಅಧ್ಯಕ್ಷರಾಗಿ ಶ್ರೀ ನಿಧೀಶ್ ಶೆಟ್ಟಿ ಜೈ ತುಳುನಾಡ್ ಆಯ್ಕೆಯಾದರು. ಹಾಗೆಯೇ ಉಪಾಧ್ಯಕ್ಷ ರಾಗಿ ಶ್ರೀ ಯತೀಶ್ ಕುಮಾರ್ ಮುಂಡೋಡಿ, ಪ್ರಧಾನ ಕಾರ್ಯದರ್ಶಿ ಗಳಾಗಿ ಶ್ರೀ ರಂಜನ್ ಎಸ್. ವೈ ಬೆಳಾಲು, ಜೊತೆ ಕಾರ್ಯದರ್ಶಿಗಳಾಗಿ ಶ್ರೀ ವಿನಯ್ ಮಣಿಯಾನ ಹಾಗೂ ದಿಯಾ ಬೋಳಾರ್, ಖಜಾಂಚಿಗಳಾಗಿ ಶ್ರೀ ಅನುದೀಪ್ ಶೆಟ್ಟಿ ಎಲ್ಲೂರು, ಜೊತೆ ಖಜಾಂಚಿಗಳಾಗಿ ಮೇಘನಾ ಪೂಜಾರಿ ವಾಮಂಜೂರು, ಸಂಘಟನಾ ಕಾರ್ಯದರ್ಶಿಗಳಾಗಿ ಶ್ರೀ ಅಕ್ಷಯ್ ಆಚಾರ್ಯ ಬೇಲಾಡಿ, ಜೊತೆ ಸಂಘಟನಾ ಕಾರ್ಯದರ್ಶಿಗಳಾಗಿ ಶ್ರೀ ಮನೋಜ್ ಪೂಜಾರಿ ಜಯಪುರ ಇವರುಗಳು ಆಯ್ಕೆಯಾದರು.
ಹಾಗೆಯೇ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಶ್ರೀ ಸುಧೀರ್ ದೇವಾಡಿಗ ಮುದ್ರಾಡಿ, ಚೈತ್ರಾ ಎನ್. ವರ್ಕಾಡಿ, ಪೂಜಾ ಬಂಗೇರ ಒಡಿಪು ಇವರು ಕೂಡ ಆಯ್ಕೆಯಾದರು.
