Home » ಮಂಗಳೂರು : ಪೊಲೀಸ್‌ ಇಲಾಖೆಯೊಂದಿಗೆ ಸಹಕರಿಸುತ್ತಿದ್ದ ಶ್ವಾನದಳದ ಸದಸ್ಯೆ ಜ್ವಾಲಾ ಸಾವು

ಮಂಗಳೂರು : ಪೊಲೀಸ್‌ ಇಲಾಖೆಯೊಂದಿಗೆ ಸಹಕರಿಸುತ್ತಿದ್ದ ಶ್ವಾನದಳದ ಸದಸ್ಯೆ ಜ್ವಾಲಾ ಸಾವು

by ಹೊಸಕನ್ನಡ
0 comments

ದಕ್ಷಿಣ ಕನ್ನಡ ಜಿಲ್ಲೆಯ ಹಲವು ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ಪೊಲೀಸ್ ಇಲಾಖೆಯೊಂದಿಗೆ ಆರೋಪಿಗಳ ಪತ್ತೆಗೆ ನೆರವಾಗುತ್ತಿದ್ದ ಶ್ವಾನದಳದ ಸದಸ್ಯೆ ಜ್ವಾಲಾ ಎಂಬ ಶ್ವಾನ ಕಿಡ್ನಿ ವೈಫಲ್ಯಕ್ಕೊಳಗಾಗಿ ಮಂಗಳವಾರದಂದು ಮೃತ ಪಟ್ಟಿದೆ.

ಅಪರಾಧ ಪತ್ತೆ ಶ್ವಾನವಾಗಿ ಪೊಲೀಸ್ ಇಲಾಖೆಯಲ್ಲಿ 7ವರ್ಷ 10 ತಿಂಗಳು ಕರ್ತವ್ಯ ನಿರ್ವಹಿಸಿದೆ ಎನ್ನಲಾಗಿದ್ದು, ಪೊಲೀಸ್ ಇಲಾಖೆಯ ಕುಮಾರ ಕರ ಈ ಶ್ವಾನದ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಇನ್ನು ಡಾಬರ್‌ಮೆನ್ ಪಿಂಚರ್ ಜಾತಿಗೆ ಸೇರಿದ ಮೃತ ಜ್ವಾಲಾ 2015ರ ಫೆಬ್ರವರಿ 27ರಂದು ಜನಿಸಿದೆ. ಬಿಳಿ ವಸ್ತ್ರದಲ್ಲಿ ಶ್ವಾನದ ಮೃತದೇಹವನ್ನು ಸುತ್ತಿ ಹೂವಿನಿಂದ ಅಲಂಕರಿಸಲಾಗಿದೆ.

ಪೊಲೀಸ್ ವಾದ್ಯ ಕುಶಾಲ ತೋಪು ಸಿಡಿಸುವ ಮುಖಾಂತರ ಪೊಲೀಸ್ ಅಧೀಕ್ಷಕ ಹೃಷಿಕೇಶ್ ಸೋನಾವಣೆ ಮತ್ತಿತರ ಅಧಿಕಾರಿ, ಸಿಬ್ಬಂದಿಯ ಸಮ್ಮುಖದಲ್ಲಿ ಗೌರವ ವಂದನೆ ಸಲ್ಲಿಸಲಾಗಿದೆ. ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವತಿಯಿಂದ ಪೊಲೀಸ್ ಮೈದಾನದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಲಾಗಿದೆ.

You may also like

Leave a Comment