Home » Mangalore: ಮಂಗಳೂರು; ಎ. 26 ರಂದು ದ.ಕ.ಹಾಲು ಉತ್ಪಾದಕರ ಒಕ್ಕೂಟದ ಆಡಳಿತ ನಿರ್ದೇಶಕರ ಚುನಾವಣೆ

Mangalore: ಮಂಗಳೂರು; ಎ. 26 ರಂದು ದ.ಕ.ಹಾಲು ಉತ್ಪಾದಕರ ಒಕ್ಕೂಟದ ಆಡಳಿತ ನಿರ್ದೇಶಕರ ಚುನಾವಣೆ

0 comments
Parliament Election

Mangalore: ಎ.26 ರಂದು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ಮುಂದಿನ ಐದು ವರ್ಷಗಳ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆ ನಡೆಯಲಿದೆ. ಈ ಚುನಾವಣೆಯು ಒಕ್ಕೂಟದ ನೋಂದಾಯಿತ ಕೇಂದ್ರ ಕಚೇರಿಯ ಆವರಣದಲ್ಲಿ ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದೆ.
ಚುನಾವಣಾ ಅಧಿಕಾರಿಗಳು ಚುನಾವಣೆಯ ವೇಳಾಪಟ್ಟಿಯನ್ನು ಮಾ.17 ರಂದು ಪ್ರಕಟ ಮಾಡಿದ್ದಾರೆ. ಎಪ್ರಿಲ್‌ 13ರಿಂದ ನಾಮಪತ್ರ ಸಲ್ಲಿಕೆ ಆರಂಭ, ನಾಮಪತ್ರವನ್ನು ಹಿಂಪಡೆಯಲು ಇಚ್ಛಿಸುವವರಿಗೆ ಎಪ್ರಿಲ್‌ 19 ರ ಮಧ್ಯಾಹ್ನ 3 ಗಂಟೆಯ ತನಕ ಅವಕಾಶವಿದೆ.

ಮತದಾನ ಪ್ರಕ್ರಿಯೆಯು ಎಪ್ರಿಲ್‌ 26 ರಂದು ಕುಲಶೇಖರದಲ್ಲಿರುವ ಒಕ್ಕೂಟದ ಕೇಂದ್ರ ಕಚೇರಿ ಪ್ರಾಂಗಣದಲ್ಲಿ ನಡೆಯಲಿದೆ. ಎಣಿಕೆಯನ್ನು ಅದೇ ದಿನ ಚುನಾವಣಾ ಅಧಿಕಾರಿಗಳು ಕೈಗೊಳ್ಳಲಿದ್ದಾರೆ. ಮತ್ತು ಫಲಿತಾಂಶ ಪ್ರಕಟ ಮಾಡಲಿದ್ದಾರೆ ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು ಮಾಹಿತಿ ನೀಡಿದ್ದಾರೆ.

You may also like