9
Mangalore: ಸಂಸದ ಕ್ಯಾ.ಬ್ರಿಜೇಶ್ ಶೆಟ್ಟಿಯವರ ಸಾರಥ್ಯದಲ್ಲಿ ನಗರದ ಬಂಗ್ರಕೂಳೂರಿನ ಗೋಲ್ಡ್ ಪಿಂಚ್ ಸಿಟಿಯಲ್ಲಿ ನಡೆಯುವ 9ನೇ ವರ್ಷದ ಮಂಗಳೂರು ಕಂಬಳ ಇಂದು ವಿಶೇಷ ಆಕರ್ಷಣೆಯೊಂದಿಗೆ ನಡೆಯಲಿದೆ.
ಶನಿವಾರ ಆಯೋಜಿಸಲಾಗಿರುವ ಈ ವರ್ಷದ ಕಂಬಳದಲ್ಲಿ ಒಟ್ಟು 9 ವಿಭಿನ್ನ ಚಟುವಟಿಕೆಗಳನ್ನು ರೂಪಿಸಲಾಗಿದೆ.ತುಳು ಸಂಸ್ಕೃತಿ ಹಾಗೂ ಕಂಬಳದ ಮಹತ್ವವನ್ನು ನಗರ ಪ್ರದೇಶದಲ್ಲಿ ಬೆಳೆದ ಯುವ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ 9 ವರ್ಷಗಳ ಹಿಂದೆ ಸಣ್ಣ ಪ್ರಯತ್ನವಾಗಿ ಆರಂಭಗೊಂಡ ಮಂಗಳೂರು ಕಂಬಳ ಇಂದು ದೊಡ್ಡ ಹಬ್ಬದ ರೂಪ ಪಡೆದುಕೊಂಡಿದೆ. ಈ ಬಾರಿಯ ಕಂಬಳವನ್ನು ಬೆಳಗ್ಗೆ 8.30ಕ್ಕೆ ಕಂಕನಾಡಿ ಬ್ರಹ್ಮಬೈದರ್ಕಳ ಗರೋಡಿಯ ಅಧ್ಯಕ್ಷ ಚಿತ್ತರಂಜನ್ ಶೆಟ್ಟಿ ಉದ್ಘಾಟಿಸಿದ್ದಾರೆ.
