3
Mangalore: ಪಣಂಬೂರು ವ್ಯಾಪ್ತಿಯ ಪಣಂಬೂರು ಕಡಲ ಕಿನಾರೆ ಬ್ರೇಕ್ ವಾಟರ್ ಬಳಿ ಸಮುದ್ರದ ದಡದಲ್ಲಿ ಇಂದು ಬೆಳಿಗ್ಗೆ ವ್ಯಕ್ತಿಯೋರ್ವರ ಮೃತದೇಹ ಪತ್ತೆಯಾಗಿದೆ. 55-60 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹ ಇದಾಗಿದ್ದು ಮೃತರ ವಾರಿಸುದಾರರು ಪತ್ತೆಯಾಗದೇ ಇರುವುದರಿಂದ ಶವವನ್ನು ಸರ್ಕಾರಿ ಜಿಲ್ಲಾ ವೆನ್ಸಾಕ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.
ಅಪರಿಚಿತ ಮೃತ ವ್ಯಕ್ತಿ ಸುಮಾರು 5.5 ಅಡಿ ಎತ್ತರವಿದ್ದು ದೃಢಕಾಯ ಶರೀರ, 3 ಇಂಚು ಉದ್ದ ಬಿಳಿ ತಲೆ ಕೂದಲು ಹಾಗೂ ಬಿಳಿ ಬಣ್ಣದ ಗಡ್ಡ ಹೊಂದಿದ್ದಾರೆ. ಕಣ್ಣುಗಳು, ದೇಹ ಊದಿಕೊಂಡಿದ್ದು ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
