Home » Mangalore: ಗೃಹಪ್ರವೇಶದ ದಿನವೇ ಮೃತಪಟ್ಟ ಮನೆ ಮಾಲಿಕ

Mangalore: ಗೃಹಪ್ರವೇಶದ ದಿನವೇ ಮೃತಪಟ್ಟ ಮನೆ ಮಾಲಿಕ

1 comment

Mangalore (Bajpe): ಜೀವನದಲ್ಲಿ ನಾವೊಂದು ಪ್ಲ್ಯಾನ್‌ ಮಾಡಿದರೆ, ಆದರೆ ವಿಧಿ ಇನ್ನೊಂದು ಪ್ಲ್ಯಾನ್‌ ಮಾಡುತ್ತೆ ಎನ್ನುವುದಕ್ಕೆ ಇಲ್ಲೊಂದು ನಡೆದಿರುವ ಘಟನೆಯೇ ಸಾಕ್ಷಿ. ಬಜ್ಪೆಯ ಕರಂಬಾರಿನಲ್ಲಿ ನೂರನ ಗೃಹ ಪ್ರವೇಶದ ಸಮಯದಲ್ಲೇ ಮನೆ ಮಾಲೀಕ ಅವರು ಹೃದಯಾಘಾತದಿಂದ ಹೊಂದಿದ್ದಾರೆ.

ಮಧುಕರ್‌ ಎಂಬುವವರೇ ಮೃತ ಹೊಂದಿದ ವ್ಯಕ್ತಿ. ಕಾವೂರಿನಲ್ಲಿ ಒಂದು ಅಂಗಡಿಯೊಂದನ್ನು ಹೊಂದಿದ್ದ ಮಧುಕರ್‌ ಅವರು, ಹಲವಾರು ಸಂಘ, ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದಾರೆ. ಮನೆ ಕಟ್ಟಿ ಸಂಭ್ರಮಿಸುತ್ತಿರುವಾಗಲೇ ಬರಸಿಡಿಲಿನಂತೆ ಬಂದೆರಗಿದ ಹೃದಯಾಘಾತವು ಮನೆ ಮಾಲೀಕನ ಜೀವವನ್ನೇ ಕಿತ್ತುಕೊಂಡಿದೆ. ಸ್ನೇಹಿತರು ನೆಂಟರು ಊಟ ಮುಗಿಸಿದ್ದು, ತನ್ನ ಹೊಸ ಮನೆಯ ಊಟ ಕೂಡಾ ಮಾಡಿಲ್ಲ ಮಧುಕರ್‌ ಅವರು. ಎಲ್ಲರ ಜೊತೆ ಮಧುಕರ್‌ ಅವರು ಸಂಭ್ರಮದಿಂದಲೇ ಓಡಾಡುತ್ತಿದ್ದರು. ಇದೀಗ ಹೊಸ ಮನೆಯಲ್ಲಿ ಸೂತಕದ ಛಾಯೆ ಉಂಟಾಗಿದೆ.

ಇದೊಂದು ಶಾಕಿಂಗ್‌ ನ್ಯೂಸ್‌ ಎಂದೇಳಬಹುದು. ಕಾವೂರಿನಲ್ಲಿ ಚಿರಪರಿಚಿತ ವ್ಯಕ್ತಿಯಾಗಿರುವ ಮಧುಕರ್‌ ಅವರ ನಿಧನಕ್ಕೆ ಇಡೀ ಊರೇ ಮೌನವಾಗಿದೆ.

You may also like

Leave a Comment