Home » Mangalore Accident: ರಿಕ್ಷಾಕ್ಕೆ ಡಿಕ್ಕಿ ಹೊಡೆದ ಬೈಕ್ : ರಸ್ತೆಗೆ ಬಿದ್ದ ಬೈಕ್ ಸವಾರನ ಮೇಲೆ ಕಾರು ಚಲಿಸಿ ಮೃತ್ಯು

Mangalore Accident: ರಿಕ್ಷಾಕ್ಕೆ ಡಿಕ್ಕಿ ಹೊಡೆದ ಬೈಕ್ : ರಸ್ತೆಗೆ ಬಿದ್ದ ಬೈಕ್ ಸವಾರನ ಮೇಲೆ ಕಾರು ಚಲಿಸಿ ಮೃತ್ಯು

1 comment
Mangalore Accident

Kuntikana Accident in Mangalore: ಮಂಗಳೂರು ನಗರದ ಕುಂಟಿಕಾನದ ಸರ್ವಿಸ್ ರಸ್ತೆಯಲ್ಲಿ ಬುಧವಾರ ಮಧ್ಯ ರಾತ್ರಿ ರಸ್ತೆ ಅಪಘಾತ (Kuntikana Accident in Mangalore)ಸಂಭವಿಸಿದ್ದು, ಈ ದುರ್ಘಟನೆಯಲ್ಲಿ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟ (Death)ಘಟನೆ ವರದಿಯಾಗಿದೆ.

ಮೃತ ಯುವಕನನ್ನು ಕಾವೂರು ನಿವಾಸಿ ಕೌಶಿಕ್ (21) ಎಂದು ಗುರುತಿಸಲಾಗಿದೆ. ಮಂಗಳೂರಿನ ಕುಂಟಿಕಾನ ಸರ್ವಿಸ್ ರಸ್ತೆಯಲ್ಲಿ ಬುಧವಾರ ರಾತ್ರಿ ಸ್ಕೂಟ‌ರ್ ನಲ್ಲಿ ಸಂಚರಿಸುತ್ತಿದ್ದ ಸಂದರ್ಭ ಆಟೋ ರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಉರುಳಿಬಿದ್ದಿದ್ದಾರೆ ಎನ್ನಲಾಗಿದೆ. ಇದೇ ಸಮಯಕ್ಕೆ ಅದೇ ರಸ್ತೆಯಲ್ಲಿ ಎದುರಿನಿಂದ ಬರುತ್ತಿದ್ದ ಕಾರು ಸ್ಕೂಟರ್ ಸವಾರನ ಮೇಲೆ ಹರಿದ ಪರಿಣಾಮ ಕೌಶಿಕ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

 

ಇದನ್ನು ಓದಿ: Indian Railway: ರೈಲ್ವೆ ಪ್ರಯಾಣಿಕರಿಗೆ ಭರ್ಜರಿ ಸುದ್ದಿ- ಈ ದಿನದಿಂದ ದೇಶಾದ್ಯಂತ ಸಂಚರಿಸಲಿದೆ ಕಡಿಮೆ ದರದ, ವಂದೇ ಭಾರತ್ ರೈಲನ್ನೂ ಮೀರಿಸೋ ಹೊಸ ಹೈಟೆಕ್ ರೈಲುಗಳು

You may also like

Leave a Comment