Home » Rishab Shetty: ಐಪಿಎಲ್‌ ಮ್ಯಾಚ್‌ ಮುಗಿದ ಕೂಡಲೇ ಕರಾವಳಿ ಕನ್ನಡಿಗರು, ತುಳುವರಿಂದ ಕಾಂತಾರ-2 ಮಾಡದಂತೆ ಭಾರೀ ಮನವಿ!

Rishab Shetty: ಐಪಿಎಲ್‌ ಮ್ಯಾಚ್‌ ಮುಗಿದ ಕೂಡಲೇ ಕರಾವಳಿ ಕನ್ನಡಿಗರು, ತುಳುವರಿಂದ ಕಾಂತಾರ-2 ಮಾಡದಂತೆ ಭಾರೀ ಮನವಿ!

1 comment
Rishab Shetty- Kantara 2

Rishab Shetty- Kantara 2: ವಿಶ್ವಾದ್ಯಂತ ಸಂಚಲನ ಮೂಡಿಸಿ ಕರಾವಳಿಯ ಕಲೆಯನ್ನು ಬಿಂಬಿಸಿ ತುಳುನಾಡಿನ ಸಂಸ್ಕೃತಿಯ ವೈಭವವನ್ನು ಜಗತ್ತಿಗೆ ಸಾರಿದ ಖ್ಯಾತಿ ಕಾಂತಾರ ಸಿನಿಮಾಗೆ(Kantara Cinema) ದಕ್ಕಲೆಬೇಕು. ಇಷ್ಟೇ ಅಲ್ಲದೆ ಈ ಸಿನಿಮಾದ ಯಶಸ್ಸು ರಿಷಬ್ ಶೆಟ್ಟಿಗೂ(Rishab Shetty) ನ್ಯಾಷನಲ್ ಸ್ಟಾರ್ ಪಟ್ಟ ತಂದು ಕೊಟ್ಟಿದ್ದಂತು ಸುಳ್ಳಲ್ಲ.

ತುಳುನಾಡಿನ ಆಚರಣೆ (Tradition) ಸಂಸ್ಕೃತಿಯನ್ನು(Culture) ಬಿಂಬಿಸುವ ಈ ಸಿನಿಮಾದಲ್ಲಿ ಪಂಜುರ್ಲಿ ದೈವದ (Panjurli)ಪಾತ್ರವನ್ನು ರಿಷಬ್ ಶೆಟ್ಟಿ ಅವರು ತುಂಬಾ ಶ್ರದ್ಧೆಯಿಂದ ಜೊತೆಗೆ ನೋಡುಗರ ಮೈಮನ ರೋಮಾಂಚನಗೊಳಿಸುವಂತೆ ನಟಿಸಿದ್ದಾರೆ. ಕಾಂತಾರ ಸಿನಿಮಾದ ಹಾಡು ಎಷ್ಟು ಸಂಚಲನ ಮೂಡಿಸಿತ್ತೋ ಅಷ್ಟೆ ಮಟ್ಟಿಗೆ ದೈವದ ಕೂಗು ಕೂಡ ದೇಶದ್ಯಂತ ತನ್ನದೇ (Kantara Viral) ಟ್ರೆಂಡ್ ಕ್ರಿಯೇಟ್ ಮಾಡಿದೆ. ಕಾಂತಾರ ಸಿನಿಮಾದಲ್ಲಿ ತುಳುನಾಡಿನ ಆಚರಣೆ ಸಂಸ್ಕೃತಿಯನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಲಾಗಿದೆ. ಅದೇ ರೀತಿ, ತುಳುನಾಡಿನ ಜನ ಭಕ್ತಿಯಿಂದ ದೈವವನ್ನು ಆರಾಧಿಸುತ್ತಾರೆ. ಅಷ್ಟೇ ಏಕೆ ದೇವರು ನಮ್ಮ ಕೈ ಬಿಟ್ಟರೂ ಕೂಡ ನಂಬಿದ ದೈವ ನಮ್ಮನ್ನು ಕಾಪಾಡುತ್ತದೆ ಎನ್ನುವ ಮಟ್ಟಿಗೆ ಜನರಲ್ಲಿ ದೈವದ ಮೇಲೆ ನಂಬಿಕೆ ಇದೆ.

ಕನ್ನಡದ ಕಾಂತಾರ(Kantara) ಸಿನಿಮಾ ಬಿಡುಗಡೆಯಾದ ಬಳಿಕ ಕರಾವಳಿಯ ದೈವಾರಾಧನೆಗೆ (Daivaradhane) ವಿಶೇಷ ಸ್ಥಾನಮಾನ ದೊರೆತಿದೆ. ಜನರಲ್ಲಿ ದೈವದ ಕುರಿತು ಭಕ್ತಿ, ನಂಬಿಕೆ ಹೆಚ್ಚಾಗಿದ್ದು, ದೈವಾರಾಧನೆ ನೋಡಲು ದೇಶ, ರಾಜ್ಯ, ಜಿಲ್ಲೆಗಳಿಂದ ಭಕ್ತರು ಆಗಮಿಸುತ್ತಿರೋದು ವಿಶೇಷ. ಆದರೆ, ಈ ನಡುವೆ ಜನರ ನಂಬಿಕೆಯ ಜೊತೆಗೆ ಚೆಲ್ಲಾಟ ಆಡುತ್ತಿರುವ ಆರೋಪ ಕೂಡ ಕೇಳಿ ಬರುತ್ತಿವೆ. ಇದಕ್ಕೆ ಇಂಬು ನೀಡುವಂತೆ ಅನೇಕ ಪ್ರಕರಣಗಳು ವರದಿಯಾಗುತ್ತಲೇ ಇವೆ. ಇದೀಗ, ಐಪಿಎಲ್ ( IPL Match) ನಲ್ಲಿಯೂ ಕೂಡ ದೈವ ನರ್ತಕರ ವೇಷ ಧರಿಸಿಕೊಂಡು ಬಂದ ಘಟನೆ ವರದಿಯಾಗಿದೆ. ದೈವದ ವಿಚಾರ ಎಲ್ಲರಿಗೂ ಹಾಸ್ಯಾಸ್ಪದದ ಸಂಗತಿಯಂತೆ ತೋರುತ್ತಿದೆಯೇ ಎಂಬ ಪ್ರಶ್ನೆ ಈಗ ಕರಾವಳಿಯ ಭಾಗದ ಹಾಗೂ ದೈವ ಭಕ್ತರಲ್ಲಿ ಭುಗಿಲೆದ್ದಿದೆ.

ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಅಭಿಮಾನಿಯೊಬ್ಬ(RCB Fan) ಕಾಂತಾರ ಚಿತ್ರದಲ್ಲಿ ರಿಷಭ್‌ ಶೆಟ್ಟಿಯ ದೈವನರ್ತಕನ ಪಾತ್ರದ ರೀತಿ ವಸ್ತ್ರ ಧರಿಸಿಕೊಂಡು ಬಂದಿದ್ದು, ಇದನ್ನು ಸ್ವತಃ ಆರ್‌ಸಿಬಿ ಟೀಮ್‌ (RCB Team )ಕೂಡ ತನ್ನ ಟ್ವಿಟರ್‌ (Twitter) ಹ್ಯಾಂಡಲ್‌ನಲ್ಲಿ ಪ್ರಕಟಿಸಿದ್ದು, ಇದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ದುರ್ಗಾದಾಸ್‌ ರಾಮದಾಸ್‌ ಕಟೀಲ್‌ ಎನ್ನುವವರು ಈ ರೀತಿಯ ಚಿತ್ರಣ ನೋಡುವುದು ನಿಜಕ್ಕೂ ಬೇಜಾರಿನ ಸಂಗತಿಯಾಗಿದೆ ಎಂದು ಹೇಳಿಕೊಂಡಿದ್ದಾರೆ. ರಿಷಭ್‌ ಶೆಟ್ಟಿ (Rishab Shetty)ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು(Royal Challengers Bangalore) ತಂಡವನ್ನೂ ಟ್ಯಾಗ್‌ (Tag)ಮಾಡಿದ್ದು, ಇದನ್ನು ಕಂಡು ದೈವದ ಕುರಿತಾಗಿ ಅವಮಾನ ಮಾಡುವ ಜನರ ನಂಬಿಕೆಯ ಪ್ರಶ್ನಿಸುವ ಹಾಗೆ ವರ್ತಿಸುವುದನ್ನು ಕಂಡು ಕೆಲವರು ರಿಷಭ್‌ ಶೆಟ್ಟಿಯವರೆ ನೀವು ಕಾಂತಾರದ 2ನೇ(Rishab Shetty- Kantara 2) ಭಾಗದ ಚಿತ್ರವನ್ನು ದಯವಿಟ್ಟು ಮಾಡುವುದು ಬೇಡ ಇದು ನಮ್ಮ ಕಳಕಳಿಯ ಮನವಿ ಎಂದು ಕೂಡ ಬರೆದುಕೊಂಡಿದ್ದಾರೆ.

ದೈವಾರಾಧನೆ ಎಲ್ಲೆಡೆ ಬಳಕೆ ಮಾಡಬಹುದಾದ ಜಾನಪದ ನೃತ್ಯವಲ್ಲ ಬದಲಿಗೆ ಇದು ತನ್ನದೇ ಆದ ಶ್ರೀಮಂತ ಸಂಪ್ರದಾಯವನ್ನು ಒಳಗೊಂಡಿದ್ದು, ಇದು ಧಾರ್ವಿುಕ ಆಚರಣೆಗಳೊಂದಿಗೆ ಸಂಪರ್ಕ ಹೊಂದಿದ್ದು, ಹೀಗಾಗಿ, ದಯವಿಟ್ಟು ದೈವರಾಧನೆಯನ್ನು ಅಗೌರವಗೊಳಿಸಬೇಡಿ’ ಎಂದು ಕರಾವಳಿ ಭಾಗದ ವ್ಯಕ್ತಿಯೊಬ್ಬರು ಬರೆದಿದ್ದಾರೆ.’ಭೂತಕೋಲಕ್ಕೆ ಸಂಬಂಧಿಸಿದ ಅಂಶಗಳನ್ನು ಮನರಂಜನೆಯ(Entertainment)ವಿಚಾರವಾಗಿ ಬಳಸದಂತೆ ಈಗಾಗಲೇ ಮನವಿ ಮಾಡಿದ್ದರು ಕೂಡ ಕಾಂತಾರರಿಂದ ಪ್ರಾರಂಭವಾದ ವಿಚಾರವನ್ನು ದೈವದ ಕುರಿತು ಜನರಿಗೆ ನೀವೇ ಹೇಳಬೇಕು’ ಎಂದು ರಿಷಭ್‌ ಶೆಟ್ಟಿ ಹಾಗೂ ಹೊಂಬಾಳೆ ಫಿಲಂ (Hombale Films) ಅವರನ್ನು ಟ್ಯಾಗ್‌ ಮಾಡಿ ಮತ್ತೊಬ್ಬರು ಕಾಮೆಂಟ್‌ ಮಾಡಿದ್ದಾರೆ. ‘

ಪ್ಲೀಸ್‌ ಇದರ ಸೀಕ್ವೆಲ್‌ ಮಾಡಬೇಡಿ. ಕಾಂತಾರ -2 ಬೇಡ ಶೆಟ್ರೇ, ಕಾಂತಾರಾ-2 ಮಾಡಬೇಡಿ. ಇದು ಕರಾವಳಿ ನಿವಾಸಿಗಳ ಮನವಿ ಎಂದುಕೊಳ್ಳಿ’ ಎಂದು ಪವನಜ ಶೆಟ್ಟಿ ಎನ್ನುವವರು ಕೋಟ್‌ ಟ್ವೀಟ್‌ ಮಾಡಿದ್ದಾರೆ. ‘ಬೆಂಗಳೂರಿನಲ್ಲಿ ಮೊನ್ನೆಯಷ್ಟೇ ನಡೆದ ಆರ್‌ಸಿಬಿ ಮತ್ತು ಮುಂಬೈ ನಡುವಿನ ಪಂದ್ಯದಲ್ಲಿ ದೈವದ ವೇಷಧಾರಿಯನ್ನ ಕಂಡು ದುಃಖವಾಗಿದ್ದು, ಕರಾವಳಿ ಕರ್ನಾಟಕದಲ್ಲಿ ದೈವಾರಾಧನೆ ಜನರು ಬಲವಾಗಿ ನಂಬುವ ಆಚರಣೆಯಾಗಿದ್ದು, ಮುಂದಿನ ಪಂದ್ಯಗಳಲ್ಲಿ ದೈವಾರಾಧನೆಯನ್ನು ಬಳಸದಂತೆ ಅಭಿಮಾನಿಗಳಲ್ಲಿ ಮನವಿ ಮಾಡಲಾಗಿದೆ. ನಾವು ತುಳುವರು ಈ ಸಂಪ್ರದಾಯವನ್ನು ಗೌರವದಿಂದ ಪರಿಗಣಿಸುತ್ತೇವೆ’ ಎಂದು ದುರ್ಗಾದಾಸ್‌ ಕಟೀಲ್‌ ಬರೆದುಕೊಂಡಿದ್ದಾರೆ. ‘ಕಾಂತಾರದ ಯಾವುದೇ ಪ್ರೀಕ್ವೆಲ್‌ ಅಥವಾ ಸೀಕ್ವೆಲ್‌ಅನ್ನು ಮಾಡಬೇಡಿ ಎಂದು ನಿಮ್ಮನ್ನು ವಿನಂತಿಸುತ್ತೇನೆ … ಇಲ್ಲದಿದ್ದರೆ ಈ ಪವಿತ್ರ ಸಂಪ್ರದಾಯವು ಪ್ರಪಂಚದ ಮುಂದೆ ತಮಾಷೆಯಾಗಿ ಕೊನೆಗೊಳ್ಳುತ್ತದೆ’ ಎಂದು ರಿಷಬ್‌ ಶೆಟ್ಟಿಗೆ ಟ್ಯಾಗ್‌ ಮಾಡಿ ಸುದೀಪ್‌ ಶೆಟ್ಟಿ ಎನ್ನುವವರು ಟ್ವೀಟ್‌ ಮಾಡಿದ್ದಾರೆ. ದೈವದ ವೇಷ ಭೂಷಣ ಧರಿಸಿದನ್ನು ಖಂಡಿಸಿ ಹೀಗೆ, ನಾನಾ ರೀತಿಯ ಕಾಮೆಂಟ್ ಗಳು ಬರುತ್ತಿವೆ.

ಇದನ್ನೂ ಓದಿ: Mangalore: ಭಾರೀ ದೊಡ್ಡ ರೈಲು ಅವಘಡ ತಪ್ಪಿಸಿದ ಮಹಿಳೆ

You may also like

Leave a Comment