Home » ಮಂಗಳೂರು : ಗಡಿಭಾಗದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು : ರೈಲ್ವೆ ಹಳಿ ತಪ್ಪಿಸಲು ಯತ್ನ!

ಮಂಗಳೂರು : ಗಡಿಭಾಗದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು : ರೈಲ್ವೆ ಹಳಿ ತಪ್ಪಿಸಲು ಯತ್ನ!

1,557 comments

ಮಂಗಳೂರು : ಮಂಗಳೂರು ಗಡಿ ಭಾಗದಲ್ಲಿ ಕಿಡಿಗೇಡಿಗಳು ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದು, ಕಾಸರಗೋಡಿನ ರೈಲ್ವೆ ಹಳಿಗಳ ಮೇಲೆ ಕಾಂಕ್ರೀಟ್ ತುಂಡು ಇಟ್ಟು ರೈಲ್ವೆ ಹಳಿಗಳನ್ನು ತಪ್ಪಿಸಲು ಕಿಡಿಗೇಡಿಗಳು ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.

ಆಗಸ್ಟ್ 21 ರಂದು ಕಾಸರಗೋಡಿನ ಕೋಟಿಕುಳಂ-ಬೇಕಳ ಮಧ್ಯೆ ರೈಲ್ವೆ ಹಳಿಗಳ ಮೇಲೆ ಕಿಡಿಗೇಡಿಗಳು ಕಬ್ಬಿಣ್ಣದ ಸರಳುಗಳು, ಕಾಂಕ್ರೀಟ್ ಇಟ್ಟು ರೈಲು ಹಳಿಗಳನ್ನು ತುಂಡು ಮಾಡಲು ಯತ್ನಿಸಿರುವ ಘಟನೆ ನಡೆದಿದೆ. ರೈಲ್ವೆ ಗಾರ್ಡ್ ಸಮಯ ಪ್ರಜ್ಞೆಯಿಂದ ಭಾರೀ ದುರಂತ ತಪ್ಪಿದೆ. ಹಳಿ ಮೇಲೆ 35 ಕೆಜಿ ಕಾಂಕ್ರೀಟ್ ತುಂಡು ಪತ್ತೆಯಾಗಿದೆ. ರೈಲ್ವೆ ಪೊಲೀಸರು ಮತ್ತು ಸ್ಥಳೀಯ ಪೊಲೀಸರು ಘಟನೆ ಸಂಬಂಧ ತನಿಖೆ ನಡೆಸುತ್ತಿದ್ದಾರೆ.

ಇನ್ನು ಕಳೆದ ಶನಿವಾರ ಚಿತ್ತಾರಿ ಎಂಬಲ್ಲಿ ಕೊಯಂಬತ್ತೂರು ಮಂಗಳೂರು ರೈಲಿನ ಮೇಲೆ ಕಿಡಿಗೇಡಿಗಳು ಕಲ್ಲೆಸೆದು ಪರಾರಿಯಾಗಿದ್ದರು.

You may also like

Leave a Comment