Home » Mangalore :ಗಾಂಜಾ ವ್ಯಸನಿ, ಬೈಕ್ ಕಳ್ಳತನದ ಆರೋಪಿ ನೇಣಿಗೆ ಶರಣು: ಅದು ಸಿಗದೆ ಹತಾಶನಾಗಿದ್ದ ವ್ಯಕ್ತಿ!

Mangalore :ಗಾಂಜಾ ವ್ಯಸನಿ, ಬೈಕ್ ಕಳ್ಳತನದ ಆರೋಪಿ ನೇಣಿಗೆ ಶರಣು: ಅದು ಸಿಗದೆ ಹತಾಶನಾಗಿದ್ದ ವ್ಯಕ್ತಿ!

0 comments

Ullal: ಬೈಕ್ ಕದ್ದು ಉಳ್ಳಾಲ ಪೊಲೀಸರಿಂದ ಬಂಧಿತನಾಗಿದ್ದ ಆರೋಪಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಉಳ್ಳಾಲದಲ್ಲಿ (Ullal)ವರದಿಯಾಗಿದೆ.

ತಲಪಾಡಿ ಗ್ರಾಮದ ನಾರ್ಲ ಪದವು ನಿವಾಸಿ ಪೈಝಲ್(24) ಆತ್ಮಹತ್ಯೆಗೆ ಶರಣಾದ ಯುವಕನಾಗಿದ್ದು, ಫೈಝಲ್ ನಿತ್ಯವೂ ಬೆಳಗ್ಗೆ 9ರಿಂದ 10 ಗಂಟೆ ಅವಧಿಯಲ್ಲಿ ಗಾಂಜಾ ಸೇದುವ ಚಟ ಬೆಳೆಸಿಕೊಂಡಿದ್ದ. ಎಂದಿನಂತೆ ಇಂದು ಕೂಡ ಗಾಂಜಾ ಸೇವನೆ ಮಾಡಲು ಮುಂದಾಗಿರುವ ಸಂಭವವಿದ್ದು, ಆದರೆ, ಗಾಂಜಾ ಸಿಗದ ಕಾರಣದಿಂದ ಮನೆಯಲ್ಲಿ ಆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಫೈಸಲ್ ತಾಯಿ, ತಂಗಿ ಮತ್ತು ಅಜ್ಜಿ ಮನೆಯಲ್ಲಿ ನೆಲೆಸಿದ್ದು, ತಾಯಿ ಮನೆಯ ಮೇಲಿನ ಅಂತಸ್ತಿಗೆ ತೆರಳಿದ ಸಂದರ್ಭ ಫೈಝಲ್ ಇಂದು ಬೆಳಗ್ಗೆ ತನ್ನ ಮನೆಯ ಮೊದಲ ಅಂತಸ್ತಿನ ಕೊಠಡಿಯ ಫ್ಯಾನಿಗೆ ನೈಲಾನ್ ಬಟ್ಟೆಯಿಂದ ಕುಣಿಕೆ ಬಿಗಿದು ಆತ್ಮಹತ್ಯೆ (Suicide) ಮಾಡಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ.

 

ಗಾಂಜಾ ವ್ಯಸನಿಯಾಗಿದ್ದ ಯುವಕ ಸೇದಲು ಗಾಂಜಾ ಸಿಗದೆ ಇದ್ದ ಹಿನ್ನಲೆ ಜಿಗುಪ್ಪೆಗೊಂಡು ಇಂದು ಬೆಳಗ್ಗೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಉಳ್ಳಾಲ ಠಾಣೆ ವ್ಯಾಪ್ತಿಯ ಪಂಡಿತ್ ಹೌಸ್ ಎಂಬಲ್ಲಿ ನಡೆದ ಬೈಕ್ ಕಳ್ಳತನ ಮಾಡಿದ ಪ್ರಕರಣದಲ್ಲಿ ಫೈಝಲ್ ನನ್ನು ಪೊಲೀಸರು ಬಂಧಿಸಿದ್ದರೆನ್ನಲಾಗಿದೆ. ಉಳ್ಳಾಲ ಠಾಣೆಯಲ್ಲಿ ಈತನ ವಿರುದ್ಧ ಗಾಂಜಾ ಸೇವನೆಯ ಕುರಿತು ಕೂಡ ಕೇಸು ದಾಖಲಾಗಿತ್ತು ಎನ್ನಲಾಗಿದೆ. ಉಳ್ಳಾಲ ಪೊಲೀಸರು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

You may also like

Leave a Comment