Home » ಮಂಗಳೂರು : ದೈವಸ್ಥಾನ,ನಾಗನ ಬ್ರಹ್ಮಪೀಠಕ್ಕೆ ದುಷ್ಕರ್ಮಿಗಳಿಂದ ಹಾನಿ

ಮಂಗಳೂರು : ದೈವಸ್ಥಾನ,ನಾಗನ ಬ್ರಹ್ಮಪೀಠಕ್ಕೆ ದುಷ್ಕರ್ಮಿಗಳಿಂದ ಹಾನಿ

by Praveen Chennavara
0 comments

ಮಂಗಳೂರು : ಬೈಕಂಪಾಡಿ ಕರ್ಕೇರ ಮೂಲ ಸ್ಥಾನ ಜರಂದಾಯ ದೈವಸ್ಥಾನ ಮತ್ತು ನಾಗನ ಬ್ರಹ್ಮ ಪೀಠವನ್ನು ದುಷ್ಕರ್ಮಿಗಳು ಹಾನಿಮಾಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.

ಮುಂಜಾನೆ ದೈವಸ್ಥಾನಕ್ಕೆ ಭೇಟಿ ನೀಡಿದವರು ಇದನ್ನು ಗಮನಿಸಿ ಸಂಬಂಧಪಟ್ಟವರಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದು,ಸ್ಥಳಕ್ಕೆ ಧಾವಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಒಂದು ನಾಗನ ಮೂರ್ತಿಯನ್ನು ಭಗ್ನ ಮಾಡಿದ್ದರೆ,ನಂದಿಯ ಕಲ್ಲಿನ ವಿಗ್ರಹಕ್ಕೂ ಹಾನಿ‌ಮಾಡಿದ್ದಾರೆ. ಕಪಾಟು ಒಡೆದು ಚೆಲ್ಲಾ ಪಿಲ್ಲಿ ಮಾಡಲಾಗಿದ್ದು, ಹಾಗೂ ಗೇಟುಗಳನ್ನು ಒಡೆದು ಹಾಕಿದ್ದಾರೆ.

You may also like

Leave a Comment