Home » Mangaluru Bengaluru Trains: ಶೀಘ್ರದಲ್ಲೇ ಮತ್ತೆ ಮಂಗಳೂರು-ಬೆಂಗಳೂರು ರೈಲು ಆರಂಭ : ಮಂಗಳೂರು-ಯಶವಂತಪುರ ರೈಲಿನ ಸಮಯದಲ್ಲಿ ಬದಲಾವಣೆ – ಇಲ್ಲಿದೆ ಹೊಸ ವೇಳಾಪಟ್ಟಿ

Mangaluru Bengaluru Trains: ಶೀಘ್ರದಲ್ಲೇ ಮತ್ತೆ ಮಂಗಳೂರು-ಬೆಂಗಳೂರು ರೈಲು ಆರಂಭ : ಮಂಗಳೂರು-ಯಶವಂತಪುರ ರೈಲಿನ ಸಮಯದಲ್ಲಿ ಬದಲಾವಣೆ – ಇಲ್ಲಿದೆ ಹೊಸ ವೇಳಾಪಟ್ಟಿ

0 comments
Mangaluru Bengaluru Trains

Mangaluru Bengaluru Trains: ಸಕಲೇಶಪುರ-ಸುಬ್ರಹ್ಮಣ್ಯ ನಡುವೆ ಉಂಟಾದ ಭೂಕುಸಿತ ಪರಿಣಾಮ ಮಂಗಳೂರು ಬೆಂಗಳೂರು ರೈಲು ಸ್ಥಗಿತಗೊಂಡು ೧೦ ದಿನಗಳ ಮೇಲಾಯ್ತು. ಇದೀಗ ಆಗಸ್ಟ್‌ ೮ರಿಂದ ಮತ್ತೆ ರೈಲು ಪ್ರಾರಂಭವಾಗಲಿದೆ ಎಂದು ವರದಿಯಾಗಿದೆ. ಈ ಮಧ್ಯೆ ನೈರುತ್ಯ ರೈಲ್ವೆ ವ್ಯಾಪ್ತಿಯಲ್ಲಿ ಕೆಲವೊಂದು ರೈಲುಗಳ (Mangaluru Bengaluru Trains) ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಿ ಆದೇಶ ಹೊರಡಿಸಲಾಗಿದೆ. ಮಂಗಳೂರು ಜಂಕ್ಷನ್ – ಯಶವಂತಪುರ ಎಕ್ಸ್ ಪ್ರೆಸ್ ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿದೆ.

ವಾರಕ್ಕೆ ಮೂರು ಬಾರಿ ಮಂಗಳೂರು ಜಂಕ್ಷನ್‌ನಿಂದ ಬೆಂಗಳೂರಿನ ಯಶವಂತಪುರದವರೆಗೆ ಸಂಚರಿಸುವ ಎಕ್ಸ್ ಪ್ರೆಸ್ (ರೈಲು ಸಂಖ್ಯೆ 16576) ರೈಲಿನ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗಿದೆ. ನವೆಂಬರ್ 1 ರಿಂದ ಇದು ಜಾರಿಗೆ ಬರಲಿದೆ ಎಂದು ರೈಲ್ವೇ ಇಲಾಖೆ ಮಾಹಿತಿ ನೀಡಿದೆ. ಈ ಹಿಂದೆ ರೈಲು (16576) ಮಂಗಳೂರು ಜಂಕ್ಷನ್‌ನಿಂದ ಬೆಳಿಗ್ಗೆ 11:30 ಗಂಟೆ ಗೆ ಬೆಂಗಳೂರಿಗೆ ಹೊರಡುತ್ತಿತ್ತು. ಇದೀಗ ಪರಿಷ್ಕೃತ ಸಮಯ ನಿಗಧಿಪಡಿಸಿದ ಪ್ರಕಾರ 11.30 ಬದಲು ಬೆಳಿಗ್ಗೆ 7 ಗಂಟೆಗೆ ಹೊರಡಲಿದೆ. ಯಾವಾಲೂ ರಾತ್ರಿ 8:45ಕ್ಕೆ ತಲುಪುತಿದ್ದ ರೈಲು ಇನ್ನು ಮುಂದೆ ಸಂಜೆ 4:30ಕ್ಕೆ ಯಶವಂತಪುರ ನಿಲ್ದಾಣವನ್ನು ಮುಟ್ಟಲಿದೆ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ರೈಲ್ವೇ ಇಲಾಖೆ ಸಹಾಯವಾಣಿ ಸಂಖ್ಯೆ 139 ಅನ್ನು ಸಂಪರ್ಕಿಸಿ ಅಥವಾ ಇಲಾಖೆ ವೆಬ್ಸೈಟ್‌ಗೆ ಭೇಟಿ ಮಾಡಬಹುದು. ಪ್ರಯಾಣಿಕರು ಮೇಲೆ ತಿಳಿಸಿದ ರೈಲುಗಳ ಪರಿಷ್ಕೃತ ಸಮಯವನ್ನು ಗಮನಿಸಿ ತಮ್ಮ ಮುಂದಿನ ಪ್ರಯಾಣವನ್ನು ಮಾಡಬೇಕಾಗಿ ನೈರುತ್ಯ ರೈಲ್ವೆ ಇಲಾಖೆ ಕೇಳಿಕೊಂಡಿದೆ.

You may also like

Leave a Comment