Home » Mangaluru: ಮಂಗಳೂರು ಪಾಲಿಕೆ ಚುನಾವಣೆ- ಮೇಯರ್, ಉಪ ಮೇಯರ್ ಸ್ಥಾನಕ್ಕೆ BJP ಅಭ್ಯರ್ಥಿಗಳು ಫೈನಲ್ !!

Mangaluru: ಮಂಗಳೂರು ಪಾಲಿಕೆ ಚುನಾವಣೆ- ಮೇಯರ್, ಉಪ ಮೇಯರ್ ಸ್ಥಾನಕ್ಕೆ BJP ಅಭ್ಯರ್ಥಿಗಳು ಫೈನಲ್ !!

0 comments

Mangaluru: ಮಂಗಳೂರು ಮಹಾನಗರ ಪಾಲಿಕೆಯ ಮುಂದಿನ ಅವಧಿಗೆ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ.

ಮೇಯರ ಸ್ಥಾನಕ್ಕೆ ಮಂಗಳೂರು(Mangaluru) ನಗರ ಉತ್ತರ ವಿಧಾನಸಭಾ ಕ್ಷೇತ್ರದ ವಾರ್ಡ್ ನಂಬರ್ 17 ಮನಪಾ ಸದಸ್ಯರಾಗಿರುವ ಮನೋಜ್ ಹಾಗೂ ಉಪಮೇಯರ್ ಅಭ್ಯರ್ಥಿತನಕ್ಕೆ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ವಾರ್ಡ್ ನಂಬರ್ 58ರ ಬಿಜೆಪಿ ಸದಸ್ಯರಾಗಿರುವ ಶ್ರೀಮತಿ ಭಾನುಮತಿ ಪಿ.ಎಸ್. ಅವರನ್ನು ಭಾರತೀಯ ಜನತಾ ಪಾರ್ಟಿಯ ಕಡೆಯಿಂದ ಆಯ್ಕೆಮಾಡಲಾಗಿದೆ.

ಉಪ ಮೇಯರ್ ಸ್ಥಾನ ಸಾಮಾನ್ಯ ಮೀಸಲಾತಿಗೆ ಒಳಪಟ್ಟಿದ್ದು, ಯಾರಿಗೂ ಈ ಸ್ಥಾನಕ್ಕೆ ಸ್ಪರ್ಧಿಸಬಹುದು. ಕಾಂಗ್ರೆಸಿನಿಂದ ಉಪ ಮೇಯರ್ ಸ್ಥಾನಕ್ಕೆ ಅಭ್ಯರ್ಥಿ ಇಳಿಸುವ ಸಾಧ್ಯತೆಯಿದೆ. ಆದರೆ ಬಿಜೆಪಿ 33 ಸದಸ್ಯರೊಂದಿಗೆ ಪೂರ್ಣ ಬಹುಮತ ಹೊಂದಿರುವುದು ಮತ್ತು ಕಾಂಗ್ರೆಸ್‌ ಕೇವಲ 14 ಸದಸ್ಯರನ್ನು ಹೊಂದಿರುವುದರಿಂದ ಫಲಿತಾಂಶ ಬದಲಾಗಲ್ಲ ಎನ್ನಲಾಗಿದೆ.

You may also like

Leave a Comment