Mangaluru: ನಗರದ ಹೊರವಲಯದ ಕಿನ್ನಿಗೋಳಿಯಲ್ಲಿ ಇಂದು (ಮಾ.17) ಸೋಮವಾರ ಓವರ್‌ಟೇಕ್ ಮಾಡುವ ವೇಗದಲ್ಲಿ ದ್ವಿಚಕ್ರ ವಾಹನ ಮತ್ತು ಬೈಕ್ ನಡುವೆ ಭೀಕರ ಅಪಘಾತ ನಡೆದಿದ್ದು, ಸವಾರನೋರ್ವ ಗಂಭೀರ ಗಾಯಗೊಂಡು ಸಾವಿಗೀಡಾದ ಘಟನೆ ನಡೆದಿದೆ.
ಕಿನ್ನಿಗೋಳಿಯ ಬಟ್ಟಕೋಡಿಯಲ್ಲಿ ಬೈಕ್ ಸವಾರ ಬಸ್ ಓವರ್‌ಟೇಕ್ ಮಾಡಲು ಯತ್ನ ಮಾಡಿದ್ದಾನೆ. ಈ ಸಮಯದಲ್ಲಿ ಮುಂಭಾಗದಿಂದ ಬರುತ್ತಿದ್ದ ಇನ್ನೋರ್ವ ಬೈಕ್ ಸವಾರ ನಿಯಂತ್ರಣ ತಪ್ಪಿ ಬಿದ್ದಿದ್ದಾನೆ. ಪರಿಣಾಮ ಇಬ್ಬರು ಸವಾರರು ರಸ್ತೆಗೆಸೆಯಲ್ಪಟ್ಟು ಗಂಭಿರ ಗಾಯಗೊಂಡಿದ್ದಾರೆ.
ಕಟೀಲು ದೇವಸ್ಥಾನದಿಂದ ಹಿಂತಿರುಗುತ್ತಿದ್ದ ಬೈಕ್ ಸವಾರ ಈ ಅಪಘಾತದಲ್ಲಿ ಮೃತ ಹೊಂದಿದ್ದಾರೆ. ಬೈಕ್ ಸವಾರ ಹನುಮಂತ ಮೃತ ಹೊಂದಿದ ವ್ಯಕ್ತಿ. ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ಮಂಗಳೂರು ಉತ್ತರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
