Home » Mangaluru: ಕುಂಪಲದಲ್ಲಿ ಇಬ್ಬರು ಮಕ್ಕಳ ತಂದೆ ನೇಣಿಗೆ ಶರಣು

Mangaluru: ಕುಂಪಲದಲ್ಲಿ ಇಬ್ಬರು ಮಕ್ಕಳ ತಂದೆ ನೇಣಿಗೆ ಶರಣು

0 comments
Mangaluru

Mangaluru: ಕುಂಪಲ ಹನುಮಾನ್‌ ನಗರ ಎಂಬಲ್ಲಿ ಎರಡು ಮಕ್ಕಳ ತಂದೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ಬೆಳ್ಳಂಬೆಳಗ್ಗೆ ನಡೆದಿದೆ. ಸ್ವಸಹಾಯ ಸಂಘದ ಬಾಕಿ ಹಣದ ವಿಚಾರಕ್ಕೆ ಈ ಆತ್ಮಹತ್ಯೆ ನಡೆದಿರುವುದಾಗಿ ಆರೋಪವೊಂದು ವರದಿಯಾಗಿದೆ

ಕುಂಪಲ ಹನುಮಾನ್‌ ನಗರ ನಿವಾಸಿ ಯೋಗೀಶ್‌ (44) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇವರು ಸೆಂಟ್ರಿಂಗ್‌ ಕೆಲಸ ಮಾಡುತ್ತಿದ್ದು, ಬೆಳಗ್ಗೆ (ಇಂದು) ತಮ್ಮ ಮನೆಗೆ ತಾಗಿಕೊಂಡಿರುವ ಶೌಚಾಲಯದ ಮರದ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸ್ವಸಹಾಯ ಗುಂಪೊಂದರ ಸದಸ್ಯರಾಗಿದ್ದ ಇವರು ನಲ್ವತ್ತು ಸಾವಿರ ರೂಪಾಯಿ ಬ್ಯಾಂಕಿಗೆ ಕಟ್ಟದೆ ಖರ್ಚು ಮಾಡಿದ್ದರು ಎನ್ನಲಾಗಿದೆ. ಈ ಕುರಿತು ಸಂಘದ ಇತರ ಸದಸ್ಯರು ಭಾನುವಾರ ಬೆಳಗ್ಗೆ ಮತ್ತು ಸಂಜೆ ಯೋಗೀಶ್‌ ಮನೆಗೆ ತೆರಳಿ ಹಣ ಕಟ್ಟಲು ಪೀಡಿಸಿದ್ದಾರೆಂಬ ಆರೋಪವಿದೆ. ಬರೀ ನಲ್ವತ್ತು ಸಾವಿರ ರೂಪಾಯಿ ವಿಚಾರಕ್ಕೆ ಆತ್ಮಹತ್ಯೆ ಮಾಡಿದ್ದರೇ? ಅಥವಾ ಇನ್ಯಾವುದೋ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡರೋ ಎಂಬುವುದು ಇನ್ನು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.

You may also like

Leave a Comment