6
Mangalur: ಮಂಗಳೂರಿನ ದೇರಳಕಟ್ಟೆ ಸಮೀಪದ ವೈದ್ಯನಾಥ ನಗರದಲ್ಲಿ, ಮನೆಮಂದಿ ಸಂಬಂಧಿಕರ ಮನೆಗೆ ಮೆಹಂದಿ ಕಾರ್ಯಕ್ರಮಕ್ಕೆ ಹೋಗಿದ್ದಾಗ ಮನೆಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಮನೆ ಸಂಪೂರ್ಣವಾಗಿ ಹೊತ್ತಿ ಉರಿದ ಘಟನೆ ನಡೆದಿದೆ.
ಸುಶೀಲ ಮಡಿವಾಳ ಎಂಬವರ ಮನೆಯಲ್ಲಿ ಈ ದುರ್ಘಟನೆ ನಡೆದಿದೆ. ಮನೆಯವರು ಮೆಹಂದಿ ಕಾರ್ಯಕ್ರಮಕ್ಕೆ ಹೋಗಿದ್ದಾಗ ಮನೆಯ ಹಂಚಿನ ಮೇಲ್ಛಾವಣಿಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ಸ್ಥಳೀಯರು ಅದನ್ನು ಗಮನಿಸಿ ಸುಶೀಲ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ.
ಕೂಡಲೇ ಬಂದು ನೋಡಿದಾಗ ಬೆಂಕಿ ಉರಿಯುತ್ತಿದ್ದು ಸ್ಥಳೀಯರು ಬಂದು ಕೂಡಲೇ ಬೆಂಕಿ ನಂದಿಸಿದ್ದಾರೆ. ಮನೆಯ ಮೇಲ್ಛಾವಣಿ ಸಂಪೂರ್ಣ ಸುಟ್ಟು ಹೋಗಿದೆ. ಯುವಕನೋರ್ವ ಗ್ಯಾಸ್ ಸಿಲಿಂಡರ್ ಹೊರಗೆ ಎಸೆದಿದ್ದು ದೊಡ್ಡ ಮಟ್ಟದ ದುರಂತವೊಂದು ತಪ್ಪಿದೆ.
