Home News ಮಂಗಳೂರು: ಕೆಲಸ ಸಿಕ್ಕಿಲ್ಲವೆಂದು ಮರವೇರಿ ಕುಳಿತ ವ್ಯಕ್ತಿ

ಮಂಗಳೂರು: ಕೆಲಸ ಸಿಕ್ಕಿಲ್ಲವೆಂದು ಮರವೇರಿ ಕುಳಿತ ವ್ಯಕ್ತಿ

Hindu neighbor gifts plot of land

Hindu neighbour gifts land to Muslim journalist

ಮಂಗಳೂರು: ಬಾಗಲಕೋಟೆಯಿಂದ ಕೆಲಸ ಹುಡುಕಿ ಮಂಗಳೂರಿಗೆ ಬಂದಿದ್ದ ಯುವಕನೋರ್ವ ಕೆಲಸ ಸಿಗದೆ ಬೇಸತ್ತು 50 ಅಡಿ ಎತ್ತರದ ಮರವೇರಿ ಕುಳಿತ ಘಟನೆ ಕರಂಗಲಪಾಡಿಯಲ್ಲಿ ಸೋಮವಾರ ನಡೆದಿರುವ ಕುರಿತು ವರದಿಯಾಗಿದೆ.

ಬಾಗಲಕೋಟೆ ಹುನಗುಂದ ನಿವಾಸಿ ಭೀಮಪ್ಪ ತಳವಾರ್‌ (24) ಮರವೇರಿದ ವ್ಯಕ್ತಿ.

ಭೀಮಪ್ಪ ಅವರ ಊರಿನವರು ಮಂಗಳೂರಿನಲ್ಲಿ ಕೆಲಸಕ್ಕಿದ್ದು, ಹಾಗಾಗಿ ತನಗೂ ಕೆಲಸ ಸಿಗಬಹುದು ಎಂದು ಮಂಗಳೂರಿಗೆ ಬಂದಿದ್ದ. ಮಂಗಳೂರಿಗೆ ಬಂದು ತಮ್ಮ ಪರಿಚಿತರನ್ನು ಸಂಪರ್ಕಿಸಿದಾಗ ಅವರು ಮರಳಿ ಊರಿಗೆ ತೆರಳಿದ್ದರು. ಇದರಿಂದ ಬೇಸತ್ತು ಕೆಲಸವೂ ಇಲ್ಲದೇ ಮರ ಹತ್ತಿ ತುದಿಯಲ್ಲಿ ಕುಳಿತಿದ್ದ.

ಸ್ಥಳೀಯರು ಆತನನ್ನು ಕೆಳಗಿಳಿಸಲು ಹರಸಾಹಸ ಪಟ್ಟಿದ್ದಾರೆ. ಆದರೂ ಆಗಲಿಲ್ಲ. ಕೊನೆಗೆ ಕದ್ರಿ ಪೊಲೀಸರು ಘಟನಾ ಸ್ಥಳಕ್ಕೆ ಬಂದಿದ್ದು, ಯುವಕನ ಮನವೊಲಿಸಿ ಕೆಳಗಿಳಿಸಿ ಬಾಗಲಕೋಟೆಗೆ ಕಳುಹಿಸಿಕೊಟ್ಟರು.