Home » Mangaluru: ರಾಜಕಾಲುವೆಗೆ ಬಿದ್ದ ಕಾರು: ಫೋಟೋಗ್ರಾಫರ್‌ ಸಾವು

Mangaluru: ರಾಜಕಾಲುವೆಗೆ ಬಿದ್ದ ಕಾರು: ಫೋಟೋಗ್ರಾಫರ್‌ ಸಾವು

0 comments

Mangaluru: ಚಾಲಕನ ನಿಯಂತ್ರಣ ತಪ್ಪಿದ ಕಾರು ತಡೆ ಇಲ್ಲದ ರಾಜಕಾಲುವೆಗೆ ಬಿದ್ದ ಪರಿಣಾಮ ಫೊಟೋಗ್ರಾಫರ್‌ ಸಾವನ್ನಪ್ಪಿದ ಘಟನೆ ನಡೆದಿದೆ. ಕಾಸರಗೋಡಿನ ಬಂದ್ಯೋಡು ಬಜೆ ನಿವಾಸಿ

ಸೂರ್ಯನಾರಾಯಣ ಮಯ್ಯ (51) ಮೃತಪಟ್ಟ ವ್ಯಕ್ತಿ ಎಂದು ವರದಿಯಾಗಿದೆ.

ಪಣಂಬೂರಿನಲ್ಲಿ ನಡೆಯಲಿದ್ದ ಕಾರ್ಯಕ್ರಮಕ್ಕೆಂದು ಬಂದ್ಯೋಡಿನಿಂದ ಬುಧವಾರ ಬೆಳಗ್ಗೆ ಕಾರಿನಲ್ಲಿ ಬಂದಿದ್ದ ಸೂರ್ಯನಾರಾಯಣ ಅವರು ಸುಮಾರು 6.15ರ ವೇಳೆ ಕೋಡಿಕಲ್‌ ಕ್ರಾಸ್‌ ಬಳಿ ಕಾರು ನಿಯಂತ್ರಣ ಕಳೆದುಕೊಂಡು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ತಡೆ ಇಲ್ಲದ ನೀರು ತುಂಬಿದ ರಾಜಕಾಲುವೆಗೆ ಬಿದ್ದಿತು. ಕಾರನ್ನು ಚಲಾಯಿಸುತ್ತಿದ್ದ ಸೂರ್ಯನಾರಾಯಣ ಅವರು ಕಾರಿನಡಿ ಸಿಲುಕಿ ಮೃತಪಟ್ಟಿರುವ ಶಂಕೆ ಇದೆ.

ಸಂಚಾರ ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like