Mangaluru: ಎರಡು ದಿನದ ಹಿಂದೆ ಮೀನುಗಾರಿಕಾ ಬಂದರಿನಲ್ಲಿ ಹಸಿ ಮೀನು ವ್ಯಾಪಾರಸ್ಥರಿಗೆ ಒಂದು ಬ್ಯಾನರ್ ಹಾಕಿದ್ದು, ಭಾರೀ ವಿವಾದ ಉಂಟಾಗಿತ್ತು. ಈ ಬ್ಯಾನರ್ ನಲ್ಲಿ ಈದ್ ಮಿಲಾದ್ ರಜೆ ಕುರಿತಾದ ಪೋಸ್ಟರ್ ಇದ್ದು, ಈ ಬಗ್ಗೆ ನಮ್ಮೊಳಗೆ ಯಾವುದೇ ಗೊಂದಲ ಇಲ್ಲ ಎಂದು ಟ್ರಾಲ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ಚೇತನ್ ಬೆಂಗ್ರೆ ತಿಳಿಸಿದ್ದಾರೆ ಎಂದು ಮಾಧ್ಯಮವೊಂದು ಪ್ರಕಟಿಸಿದೆ. ಅಷ್ಟು ಮಾತ್ರವಲ್ಲದೇ ಈ ವಿಚಾರ ಹೊರಗಿನವರು ಅಪಪ್ರಚಾರ ಮಾಡಿ ಸಮುದಾಯದ ಶಾಂತಿ ಕದಡುವ ಪ್ರಯತ್ನ ನಡೆಸುವುದು ಬೇಡ ಎಂದು ಅವರು ಮನವಿ ಮಾಡಿರುವುದಾಗಿ ಮಾಧ್ಯಮ ಪ್ರಕಟಿಸಿದೆ.
ಈ ರೀತಿಯ ಬ್ಯಾನರ್, ಫ್ಲೆಕ್ಸ್ ಹಾಕುವುದು ಇದೇ ಮೊದಲ ಸಲ ಅಲ್ಲ. ಪ್ರತೀ ವರ್ಷ ಮೀನುಗಾರಿಕೆ ಚಟುವಟಿಕೆ ನಡೆಸುವ ಹಾಗೂ ಬಂದರಿಗೆ ಮೀನಿಗಾಗಿ ಬರುವವರಿಗೆ ಈ ಕ್ರಮ ಅನುಸರಿಸುವುದು ಸಾಮಾನ್ಯ. ಚೌತಿ, ಬಾರ್ಕೂರು ಶ್ರೀ ಕುಲ ಮಹಾಸ್ತ್ರಿ ಅಮ್ಮನವರ ವಾರ್ಷಿಕ ಜಾತ್ರೆ, ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ವಾರ್ಷಿಕ ಜಾತ್ರೆ, ಮೀಲಾದುನ್ನಬಿ, ಬಕ್ರೀದ್, ಈದುಲ್ ಫಿತ್ರ್, ಕ್ರಿಸ್ಮಸ್ ಹಾಗೂ ಗುಡ್‌ಫ್ರೈಡೆ ಈ ರಜೆಯನ್ನು ಪಾಲಿಸುತ್ತಾರೆ ಎಲ್ಲರೂ. ಇದು ಕಳೆದ ಹಲವಾರು ವರ್ಷಗಳಿಂದ ಹಿರಿಯರು ಸೇರಿ ಕೈಗೊಂಡ ಒಮ್ಮತದ ನಿರ್ಧಾರ. ಈ ಪ್ರಕಾರ ಮೀನುಗಾರಿಕಾ ಬಂದರಿನಲ್ಲಿ ಎಂಟು ದಿನ ಮೀನುಗಾರಿಕಾ ರಜೆ ಘೋಷಣೆ ಪಾಲಿಸಲಾಗುತ್ತದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕರ್ನಾಟಕ ಪರ್ಸಿನ್ ಮೀನುಗಾರರ ಸಂಘ, ಮಂಗಳೂರು ಟ್ರಾಲ್ ಬೋಟ್, ಹಸಿಮೀನು ವ್ಯಾಪಾರಸ್ಥರು, ಒಣ ಮೀನು ವ್ಯಾಪಾರಸ್ಥರು, ಸೀ ಫುಡ್ ಬಯ್ಸರ್ ಅಸೋಸಿಯೇಶನ್, ಮಂಗಳೂರು (Mangaluru) ಹಸಿ ಮೀನು ಕಮಿಶನ್ ಏಜೆಂಟರ ಸಂಘ, ದ.ಕ. ಜಿಲ್ಲಾ ಗಿಲ್ ನೆಟ್ ಮೀನುಗಾರರ ಸಂಘಗಳ ಪ್ರತಿನಿಧಿಗಳ ಪರವಾಗಿ ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.
ಇದನ್ನು ಓದಿ: Inverter LED Bulb: ಕರೆಂಟ್ ಹೋದರೆ ಚಿಂತಿಸಬೇಡಿ, ಈ ಬಲ್ಬ್ ಅಳವಡಿಸಿ, ಮನೆ ಬೆಳಗಿಸಿ! ಇದಕ್ಕಿದೆ ಭಾರೀ ಬೇಡಿಕೆ!!!
