Home » Mangaluru News: ಪ್ರೀತಿಯ ಪತಿಯೇ ಚಿನ್ನಾಭರಣ ಕಳವಿನ ಮಾಸ್ಟರ್ ಪ್ಲಾನ್ ಸೂತ್ರದಾರ , ಪತ್ನಿಯಿಂದ ದೂರು

Mangaluru News: ಪ್ರೀತಿಯ ಪತಿಯೇ ಚಿನ್ನಾಭರಣ ಕಳವಿನ ಮಾಸ್ಟರ್ ಪ್ಲಾನ್ ಸೂತ್ರದಾರ , ಪತ್ನಿಯಿಂದ ದೂರು

0 comments

Mangaluru News: ಗಂಡ ಹೆಂಡತಿಯ ನಡುವೆ ಇರುವ ನಂಟು ಬಹಳ ಪವಿತ್ರವಾದುದು. ಯಾವುದೋ ನಂಬಿಕೆಯ ಪ್ರತಿಬಿಂಬದ ಸಂಬಂಧ ಎಂದರೆ ತಪ್ಪಾಗಲಾರದು. ಆದರೆ ಮಂಗಳೂರಿನ ಘಟನೆಯ ಬಗ್ಗೆ ನೀವು ತಿಳಿಯಲೇ ಬೇಕು.

ಕದ್ರಿ ಪೊಲೀಸ್ ಠಾಣೆಗೆ ಪತ್ನಿ ದೂರು ನೀಡಿದಳು. ಕಳ್ಳತನ ಮಾಡಿದ ಪತಿ ಹಾಗೂ ಆತನಿಗೆ ಸಹಕರಿಸಿದ ಇಬ್ಬರ ವಿರುದ್ಧ ದೂರು ದಾಖಲಾಗಿದೆ.

ಪತ್ನಿ ನೀಡಿದ ದೂರಿನ ಪ್ರಕಾರ, ಮದುವೆ ವೇಳೆ ತಾಯಿ ಮನೆಯಿಂದ ಮತ್ತು ಪತಿಯ ಮನೆಯಿಂದ ನೀಡಿದ ಚಿನ್ನ ಸೇರಿದಂತೆ ಒಟ್ಟು 75 ಪವನ್ ಚಿನ್ನವನ್ನು ತಾವು ವಾಸಿಸುತ್ತಿದ್ದ ಕೆ.ಪಿ.ಟಿ. ವ್ಯಾಸ ನಗರದ ಶಾಂತಲಾ ಆಶಿಯಾನ ಫ್ಲಾಟ್ನ ಕಪಾಟಿನಲ್ಲಿ ಭದ್ರವಾಗಿರಿಸಿದ್ದರು. ಈ ವಿಷಯ ಪತ್ನಿ ಮತ್ತು ಅವರ ಗಂಡನಾದ ಇಲಿಯಾಸ್‌ನಿಗೆ ಮಾತ್ರ ತಿಳಿದಿತ್ತು.

2023 ರ ಏಪ್ರಿಲ್ ತಿಂಗಳಿನಲ್ಲಿ ಗಂಡ ಹೆಂಡತಿಗೆ ಜಗಳವಾಗಿ ಮಹಿಳೆ ಮನೆಯಿಂದ ಹೊರ ಬಂದು ತಾಯಿ ಮನೆಯಲ್ಲಿ ವಾಸವಿರುತ್ತಿತ್ತು. ವಾರಕ್ಕೊಮ್ಮೆ ಫ್ಲಾಟ್‌ಗೆ ಹೋಗಿ ಬರುತ್ತಿದೆ, ಒಂದು ತಿಂಗಳ ನಂತರ ಫ್ಲ್ಯಾಟ್‌ಗೆ ಹೋಗಿ ವಾಚ್‌ಮ್ಯಾನ್‌ ವಿಚಾರವಾಗಿ ಅವರ ಗಂಡ ಒಂದು ವಾರದಿಂದ ಬಂದಿಲ್ಲ ಎಂದು ಪ್ರಕಟಿಸಿದರು.

ಈ ಸಂದರ್ಭ ದೂರುದಾರ ಮಹಿಳೆ ಅನುಮಾನಗೊಂಡು ಮನೆಯ ಬಂಗಾರವಿಟ್ಟ ಲಾಕರ್ ಕಪಾಟಿನಲ್ಲಿ ನೋಡಿದಾಗ ಲಾಕರ್ ಸಮೇತ ಚಿನ್ನವಿರಲಿಲ್ಲ. ಈ ಸಂದರ್ಭ ಗಂಡನಿಗೆ ಕರೆ ಮಾಡಿ ‘ನಾನು ಲಾಕರ್‌ ಸಮೇತ ಚಿನ್ನವನ್ನು ಕದ್ದುಕೊಂಡು ಹೋಗುತ್ತೇನೆ. ನಿನಗೆ ಏನು ಮಾಡಿದೆ’ ಎಂದು ಹೇಳಿ ಹೆದರಿಸಿದ್ದಾರೆ.

ಜೊತೆಗೆ ಚಿನ್ನವನ್ನು ಬ್ಯಾಂಕಿನ ಸುತ್ತ 28.5ಕ್ಕೆ ಅಡವಿಟ್ಟು ಹಣ ಪಡೆಯಲು ಮತ್ತು ಪ್ರಭಾಕರ್ ಎಂಬವರಿಗೆ 3 ತಿಂಗಳ ಮಟ್ಟಿಗೆ ಬಡ್ಡಿ ಕಟ್ಟಲು ಅವಕಾಶ ನೀಡುವುದಾಗಿ ತಿಳಿಸಿದ್ದಾನೆ.

ಆದರೆ ಅಡವಿಟ್ಟ ಚಿನ್ನದಲ್ಲಿ ಪ್ರಭಾಕರನು ಮೂರು ತಿಂಗಳಾಗುವ ಮೊದಲು ಸುಮಾರು 12 ಲಕ್ಷದಷ್ಟು ಚಿನ್ನ ಬಿಡಿಸಿ ಕರಗಿಸಿ ಮಾರಾಟ ಮಾಡಿರುವುದನ್ನು ತಿಳಿಸಿದ್ದಾನೆ. ಈ ಬಗ್ಗೆ ದೂರುದಾರ ಮಹಿಳೆ ಅವರು ಮಂಗಳೂರು ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಈ ಪ್ರಕರಣವಾಗಿ ಇದೀಗ ವಿಚಾರಣೆ ನಡೆಯುತ್ತಿದೆ, ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

You may also like