Mangaluru: ಉಳ್ಳಾಲ ತಾಲೂಕಿನಲ್ಲಿ ಅಪ್ರಾಪ್ತ ವಯಸ್ಕ ಬಾಲಕಿಗೆ ಬಾಲ್ಯವಿವಾಹ ಮಾಡಲು ತಯಾರಿ ನಡೆಸಿದ್ದು, ಈ ಸಮಯದಲ್ಲಿ ಅಧಿಕಾರಿಗಳು ದಾಳಿ ನಡೆಸಿರುವ ಘಟನೆಯೊಂದು ನಡೆದಿದೆ(Mangaluru). ಉಳ್ಳಾಲ ತಾಲೂಕಿನ ಇರಾ ಎಂಬಲ್ಲಿ ಈ ಘಟನೆ ನಡೆದಿದೆ.
ವಿಟ್ಲ ಸಿ.ಡಿ.ಪಿ.ಒ ಇಲಾಖೆ ವ್ಯಾಪ್ತಿಗೊಳಪಟ್ಟ 17ವರ್ಷದ ಅಪ್ರಾಪ್ತ ವಯಸ್ಕ ಬಾಲಕಿಯನ್ನು ಸಜೀಪನಡು ಗ್ರಾಮದ ಯುವಕನಿಗೆ ಮದುವೆ ಮಾಡುವ ಉದ್ದೇಶದಿಂದ ನಿಶ್ಚಿತಾರ್ಥ ನಡೆದು ಮದುವೆಗೆಂದು ಹಾಲ್ ಬುಕ್ ಮಾಡಲಾಗಿತ್ತು.
ಆದರೆ ಬಾಲಕಿ ಮನೆಯಲ್ಲಿ ಮದರಂಗಿ ಕಾರ್ಯಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಇಲಾಖೆಗೆ ಮಾಹಿತಿ ದೊರಕಿದ್ದು, ಕೂಡಲೇ ಸಿಡಿಪಿಒ ಇಲಾಖೆಯ ಹಿರಿಯ ಮೇಲ್ವಿಚಾರಕಿ, ಗ್ರಾಪಂ, ತಾಪಂ ಅಧಿಕಾರಿಗಳು, ಕಂದಾಯ ನಿರೀಕ್ಷಕ, ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು, ಬಂಟ್ವಾಳ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ, ಈ ಮದುವೆಯನ್ನು ನಿಲ್ಲಿಸಿದ್ದಾರೆ.
ಬಾಲಕಿಗೆ 18 ವರ್ಷ ತುಂಬದ ಕಾರಣ ಇದು ಬಾಲ್ಯವಿವಾಹದಡಿಯಲ್ಲಿ ಬರುತ್ತದೆ ಹಾಗಾಗಿ ಕಾನೂನಡಿಯಲ್ಲಿ ಏನೇನು ತೊಂದರೆಗಳಿದೆ ಎಂದು ತಿಳಿಸಿ ಮದುವೆ ನಿಲ್ಲಿಸಿದ್ದಾರೆ. ಮದುವೆ ಹಾಲ್‌ನ ಮಾಲೀಕರಿಗೆ, ವರನ ಕಡೆಯವರಿಗೆ ಕೂಡಾ ವಿಷಯ ತಿಳಿಸಿ ಮದುವೆ ನಿಲ್ಲಿಸಲು ಹೇಳಿದ್ದಾರೆ.
ಅಧಿಕಾರಿಗಳು ಅಪ್ರಾಪ್ತ ವಯಸ್ಕ ಬಾಲಕಿಯ ಮನೆಗೆ ಹೋಗುವಾಗ ಸಂಪೂರ್ಣ ದಾಖಲೆಗಳ ಸಮೇತ ಹೋಗಿ, ಕಾನೂನಾತ್ಮಕ ವಿವರಗಳನ್ನು ಹೇಳಿದ್ದಾರೆ. ನಂತರ ಮದುವೆ ನಿಲ್ಲಿಸಲು ಮನೆಯವರಿಂದ ಮುಚ್ಚಳಿಕೆ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Mullugudde ಕೊರಗಜ್ಜನ ಪವಾಡ! ಕೊರಗಜ್ಜ ಗುಡಿಯಲ್ಲಿ ಪ್ರಾರ್ಥನೆ ಮಾಡಿಕೊಂಡ ಯುವಕನ ಕುಟುಂಬಸ್ಥರು!!
