3
Mangaluru: ಕೇರಳದ ಪೊನ್ನಾನಿ, ಕಡಲುಂಡಿಯಲ್ಲಿ ಪವಿತ್ರ ರಂಜನ್ ಮಾಸದ ಚಂದ್ರ ದರ್ಶನವಾಗಿದೆ. ಹಾಗಾಗಿ ಮಾರ್ಚ್ 2 ರ ಭಾನುವಾರದಿಂದ ರಂಜಾನ್ ಉಪವಾಸ ಪ್ರಾರಂಭವಾಗಲಿದೆ.
ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಮತ್ತು ಉಳ್ಳಾಲ ಖಾಝಿ ಎ.ಪಿ. ಅಬೂಬಕರ್ ಮುಸ್ಲಿಯಾರ್ ನಾಳೆಯಿಂದ ರಂಜಾನ್ ಉಪವಾಸ ಆರಂಭ ಎಂದು ಘೋಷಿಸಿದ್ದಾರೆ.
ಅರ್ಧ ಚಂದ್ರನ ದರ್ಶನವಾಗುವುದರೊಂದಿಗೆ ಇಸ್ಲಾಮಿಕ ಸಂಪ್ರದಾಯದಲ್ಲಿ ರಂಜಾನ್ ಅಧಿಕೃತ ಪ್ರಾರಂಭ ಎಂದರ್ಥ. ಶುಕ್ರವಾರ ಚಂದ್ರ ಕಾಣಸಿದೇ ಹೋದ ಕಾರಣ ಪವಿತ್ರ ತಿಂಗಳು ಶನಿವಾರ ಸಂಜೆ ಚಂದ್ರನ ದರ್ಶನ ಆಗಿದ್ದು, ಭಾನುವಾರ ಉಪವಾಸ ಪ್ರಾರಂಭವಾಗಲಿದ್ದು, ಮಾ.31 ರಂದು ರಂಜಾನ್ ಹಬ್ಬ ಆಚರಣೆ ನಡೆಯಲಿದೆ.
