Mangalore: ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ನಂತರ ಸುಳ್ಳು ಸುದ್ದಿ, ಪ್ರಚೋದನಕಾರಿ ಸಂದೇಶಗಳನ್ನು ಹಾಕಿದರೆ ಅವರ ಮೇಲೆ ಪ್ರಕರಣ ದಾಖಲು ಮಾಡಲಾಗುತ್ತದೆ ಎಂದು ಪೊಲೀಸರು ಇತ್ತೀಚೆಗಷ್ಟೇ ಎಚ್ಚರಿಕೆಯನ್ನು ನೀಡಿದ್ದರು. ಇದೀಗ ಈ ವಿಷಯಕ್ಕೆ ಸಂಬಂಧಪಟ್ಟಂತೆ ಪ್ರಚೋದನಕಾರಿ ಸಂದೇಶ ಪೋಸ್ಟ್ ಮಾಡಿದ್ದಾರೆ ಎಂದು ʼಶಂಖನಾದʼ ಹೆಸರಿನ ಇನ್‌ಸ್ಟಾಗ್ರಾಮ್ ಪೇಜನ್ನು ನಿಷೇಧ ಮಾಡಲಾಗಿದೆ.
ಹನ್ನೊಂದು ಸಾವಿರ ಮಂದಿ ಫಾಲೋವರ್ಸ್‌ಗಳನ್ನು ಹೊಂದಿರುವ ಈ ಪೇಜ್ ಸುಹಾಸ್ ಹತ್ಯೆ ಖಂಡಿಸಿ ಅಲ್ಲಲ್ಲಿ ನಡೆಯುವ ಪ್ರತಿಭಟನೆಗಳ ಪೋಸ್ಟರ್ ಮತ್ತು ಹತ್ಯೆ ಪೊಲೀಸ್ ಇಲಾಖೆಯ ವೈಫಲ್ಯ ಎಂದು ಬಿಂಬಿಸುವ ರೀತಿ ಪೋಸ್ಟರ್ ಹಂಚಿಕೊಳ್ಳಲಾಗಿತ್ತು. ಜನರನ್ನು ಉದ್ರೇಕಿಸುವ, ದ್ವೇಷ ಭಾವನೆ ಹುಟ್ಟುವಂತೆ ಮಾಡಲಾಗುತ್ತಿತ್ತು ಎಂದು ಈ ಕುರಿತು ಮಂಗಳೂರಿನ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕುರಿತು ಪ್ರಾಧಿಕಾರಕ್ಕೆ ಪೊಲೀಸರು ಪೇಜ್ ಕುರಿತು ಮಾಹಿತಿ ನೀಡುವಂತೆ ಪತ್ರ ಬರೆದಿದ್ದರು. ಲಾ ಎನ್ಫೋರ್ಸ್‌ಮೆಂಟ್ ಏಜನ್ಸಿಯವರು ಶಂಖನಾದ ಹೆಸರಿನ ಪೇಜನ್ನು ರದ್ದು ಮಾಡಿದ್ದಾರೆ.
