Home » Mangaluru: ಕುಡುಪು ಗುಂಪು ಹತ್ಯೆ ಪ್ರಕರಣದಲ್ಲಿ ಅಮಾಯಕರ ಸಿಲುಕಿಸಿದರೆ ಹೋರಾಟ-ಶಾಸಕ ಡಾ.ಭರತ್‌ ಶೆಟ್ಟಿ!

Mangaluru: ಕುಡುಪು ಗುಂಪು ಹತ್ಯೆ ಪ್ರಕರಣದಲ್ಲಿ ಅಮಾಯಕರ ಸಿಲುಕಿಸಿದರೆ ಹೋರಾಟ-ಶಾಸಕ ಡಾ.ಭರತ್‌ ಶೆಟ್ಟಿ!

0 comments
Bharath Shetty

Mangaluru: ಕುಡುಪುವಿನಲ್ಲಿ ದೇಶವಿರೋಧಿ ಘೋಷಣೆ ಕೂಗಿದ ಕೇರಳ ಮೂಲದ ವ್ಯಕ್ತಿಯ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಗಳೂರು ಉತ್ತರ ಶಾಸಕ ಡಾ.ಭರತ್‌ ಶೆಟ್ಟಿ ಅವರು, ಈ ಪ್ರಕರಣದಲ್ಲಿ ರಾಜಕೀಯ ನಡೆಸದೇ, ಅಪರಾಧವನ್ನಾಗಿಯೇ ನೋಡಬೇಕು. ರಾಜಕೀಯಕ್ಕಾಗಿ ಅಮಾಯಕ ಬಿಜೆಪಿ ಕಾರ್ಯಕರ್ತರನ್ನು ಪ್ರಕರಣದಲ್ಲಿ ಸಿಲುಕಿಸಿದರೆ ನಾವು ಅಮಾಯಕರ ಪರವಾಗಿ ನಿಲ್ಲುತ್ತೇವೆ, ಪ್ರತಿಭಟನೆ, ಠಾಣೆಗೆ ಘೇರಾವ್‌ ಹಾಕುತ್ತೇವೆ ಎಂದು ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಈ ಪ್ರಕರಣದಲ್ಲಿ ಬಿಜೆಪಿ ಕಾರ್ಯಕರ್ತರು ಇದ್ದಾರೆ ಎಂದು ಬಿಜೆಪಿ ಕಾರ್ಯಕರ್ತ ರವೀಂದ್ರ ನಾಯಕ್‌ ಅವರ ಹೆಸರನ್ನು ಕಾಂಗ್ರೆಸ್‌ ಜಿಲ್ಲಾಧ್ಯಕ್ಷರು ಹೇಳಿದ್ದಾರೆ. ನಮಗೆ ರಾಜಕೀಯ ಒತ್ತಡವಿದೆ ಎಂದು ಅನಧಿಕೃತವಾಗಿ ಪೊಲೀಸರು ಒಪ್ಪಿಕೊಂಡಿದ್ದಾರೆ. ಇಂತವರನ್ನೇ ಬಂಧನ ಮಾಡಬೇಕು ಎನ್ನುವ ಒತ್ತಡವಿದೆ ಎನ್ನುತ್ತಿದ್ದಾರೆ ಎಂದು ಹೇಳಿದರು.

ಕ್ರಿಕೆಟ್‌ ಆಟದ ಸ್ಥಳದಲ್ಲಿದ್ದವರನ್ನೂ ಬಂಧಿಸಲಾಗುತ್ತಿದೆ. ಅಮಾಯಕರನ್ನು ಬಂಧಿಸಿದರೆ ನಾವು ಸುಮ್ಮನಿರುವುದಿಲ್ಲ. ಇದು ರಾಷ್ಟ್ರದೋಹ ಎಂದರೂ ತಪ್ಪಾಗದು ಎಂದು ಡಾ. ಭರತ್‌ ಶೆಟ್ಟಿ ಹೇಳಿದರು.

You may also like