Home » ಅಶ್ಲೀಲವಾಗಿ ವರ್ತಿಸುತ್ತಿದ್ದ ಜೋಡಿಗೆ ಬಜರಂಗಿಗಳ ಬುದ್ದಿವಾದ,ಪೊಲೀಸರಿಗೆ ಮಾಹಿತಿ | ಬಜರಂಗದಳದ ಕಾರ್ಯಕರ್ತರ ವಿರುದ್ದವೇ ಪ್ರಕರಣ ದಾಖಲು

ಅಶ್ಲೀಲವಾಗಿ ವರ್ತಿಸುತ್ತಿದ್ದ ಜೋಡಿಗೆ ಬಜರಂಗಿಗಳ ಬುದ್ದಿವಾದ,ಪೊಲೀಸರಿಗೆ ಮಾಹಿತಿ | ಬಜರಂಗದಳದ ಕಾರ್ಯಕರ್ತರ ವಿರುದ್ದವೇ ಪ್ರಕರಣ ದಾಖಲು

by Praveen Chennavara
0 comments

ಮಂಗಳೂರು: ಕದ್ರಿ ಠಾಣಾ ವ್ಯಾಪ್ತಿಯ ಸೈಂಟ್ ಆಗ್ನೇಸ್ ಬಳಿ ನಿನ್ನೆ ರಾತ್ರಿ ಅಶ್ಲೀಲವಾಗಿ ವರ್ತಿಸುತ್ತಿದ್ದ ಜೋಡಿಗಳಿಗೆ ಬಜರಂಗದಳದ ಕಾರ್ಯಕರ್ತರು ಬುದ್ದಿ ಹೇಳಿ ಪೋಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.

ಆದರೆ ಜೋಡಿಗಳ ಜೊತೆ ಪೋಲೀಸ್ ಸ್ಟೇಷನ್ ಗೆ ತೆರಳಿದ ಕಾರ್ಯಕರ್ತರ ಮೇಲೆಯೇ ಮತ್ತೆ ಆ ಜೋಡಿ ಬಜರಂಗದಳದ ಕಾರ್ಯಕರ್ತರು ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಪ್ರಕರಣ ದಾಖಲಿಸಿದ್ದಾರೆ.

ಇಬ್ಬರು ಬಜರಂಗದಳದ ಕಾರ್ಯಕರ್ತರನ್ನು ಪೊಲೀಸರು ನಿನ್ನೆ ಬಂದಿಸಿದ್ದಾರೆ.

ರಾಸಲೀಲೆಯಲ್ಲಿ ತೊಡಗಿದ್ದ ಜೋಡಿಯನ್ನು ನಾವು ಪೋಲಿಸರಿಗೆ ಒಪ್ಪಿಸಿದರೂ ನಮ್ಮ ಮೇಲೆಯೇ ಪ್ರಕರಣ ದಾಖಲಿಸಿ ಕೊಂಡಿದ್ದಾರೆ ಎಂದು ಪೋಲಿಸರ ಮೇಲೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

You may also like

Leave a Comment