Home » ಮಂಗಳೂರು| ಬುರ್ಖಾ ಧರಿಸುವ ವೇಳೆ ಬಾಯಲ್ಲಿ ಕಚ್ಚಿ ಹಿಡಿದಿದ್ದ ಸ್ಕಾರ್ಫ್ ಪಿನ್ ನುಂಗಿದ ಮಹಿಳೆ, ಆಮೇಲೆ ಆದದ್ದಾದರೂ ಏನು?

ಮಂಗಳೂರು| ಬುರ್ಖಾ ಧರಿಸುವ ವೇಳೆ ಬಾಯಲ್ಲಿ ಕಚ್ಚಿ ಹಿಡಿದಿದ್ದ ಸ್ಕಾರ್ಫ್ ಪಿನ್ ನುಂಗಿದ ಮಹಿಳೆ, ಆಮೇಲೆ ಆದದ್ದಾದರೂ ಏನು?

by ಹೊಸಕನ್ನಡ
0 comments

28 ವರ್ಷದ ಮಹಿಳೆಯೊಬ್ಬರು ಬುರ್ಖಾ ಧರಿಸುವ ಸಂದರ್ಭದಲ್ಲಿ ಅಕಸ್ಮಾತಾಗಿ ಪಿನ್ ಅನ್ನು ನುಂಗಿದ್ದು, ಅದನ್ನು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಮಹಿಳೆ ಬುರ್ಖಾ ಧರಿಸುವ ವೇಳೆ ಬಾಯಲ್ಲಿ ಕಚ್ಚಿ ಹಿಡಿದಿದ್ದ ಪಿನ್ ಬಾಯಿ ಮೂಲಕ ದೇಹದೊಳಗೆ ಸೇರಿಕೊಂಡಿತ್ತು.

ದೇಹದೊಳಗೆ ಪಿನ್ ಹೋದ ತಕ್ಷಣ ಮಹಿಳೆಗೆ ವಿಪರೀತ ನೋವು ಪ್ರಾರಂಭವಾಗಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ಮಹಿಳೆಯನ್ನು ದಾಖಲಿಸಲಾಗಿತ್ತು.

ಶ್ವಾಸನಾಳದಲ್ಲಿದ್ದ ಸ್ಕಾರ್ಫ್ ಪಿನ್ ದೇರಳಕಟ್ಟೆಯ ಯೆನಪೋಯ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆದಿದ್ದಾರೆ.

You may also like

Leave a Comment