Home » ಮಂಗಳೂರು‌ : ತಂದೆಯಿಂದ ಮಗನಿಗೆ ಗುಂಡು ಹಾರಾಟ | ಮಗನ ಮೆದುಳು ನಿಷ್ಕ್ರಿಯ ,ತಂದೆಗೆ ಹೃದಯಾಘಾತ

ಮಂಗಳೂರು‌ : ತಂದೆಯಿಂದ ಮಗನಿಗೆ ಗುಂಡು ಹಾರಾಟ | ಮಗನ ಮೆದುಳು ನಿಷ್ಕ್ರಿಯ ,ತಂದೆಗೆ ಹೃದಯಾಘಾತ

by Praveen Chennavara
0 comments

ಮಂಗಳೂರಿನ ಮೋರ್ಗನ್ಸ್‌ಗೇಟ್‌ನಲ್ಲಿ ಉದ್ಯಮಿ ಹಾರಿಸಿದ ಗುಂಡು ತಗುಲಿ ಗಂಭೀರ ಸ್ಥಿತಿಯಲ್ಲಿದ್ದ ಪುತ್ರನ ಮೆದುಳು ನಿಷ್ಕ್ರಿಯಗೊಂಡಿದೆ.

ಉದ್ಯಮಿ ರಾಜೇಶ್ ಪ್ರಭು ಅವರ ಪುತ್ರ ಸುಧೀಂದ್ರ ಪ್ರಭು(16) ಮೃತ ಬಾಲಕ. ಸುಧೀಂದ್ರನ ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆಯಲ್ಲಿ ಆತನ ಅಂಗಾಂಗಳ ದಾನ ಮಾಡುವ ಕುರಿತ ಪ್ರಕ್ರಿಯೆ ನಡೆಯುತ್ತಿದೆ ಎಂದು ಆಸ್ಪತ್ರೆಯ ಮೂಲಗಳು ಖಚಿತಪಡಿಸಿವೆ

ಹೃದಯಾಘಾತ: ಮಗನ ಮೆದುಳು ನಿಷ್ಕ್ರಿಯ ಸುದ್ದಿ ತಿಳಿಯುತ್ತಿದ್ದಂತೆ ರಾಜೇಶ್ ಪ್ರಭು ಅವರಿಗೆ ಹೃದಯಾಘಾತ ಉಂಟಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಹಣಕಾಸು ವಿಷಯದಲ್ಲಿ ಉದ್ಯಮಿಯ ಪತ್ನಿ ಹಾಗೂ ಚಾಲಕ, ಕ್ಲೀನರ್ ನಡುವೆ ಮಂಗಳವಾರ ಸಂಜೆ ವಾಗ್ವಾದ ಏರ್ಪಟ್ಟಿತು. ಈ ವೇಳೆ ಸ್ಥಳಕ್ಕಾಗಮಿಸಿದ ತಂದೆ, ಮಗ ಕೂಡಾ ಸಿಬ್ಬಂದಿ ಜೊತೆ ಜಗಳಕ್ಕಿಳಿದಿದ್ದರೆನ್ನಲಾಗಿದೆ. ಈ ನಡುವೆ ಪುತ್ರ ಸುಧೀಂದ್ರ ಚಾಲಕ, ಕ್ಲೀನರ್ ಮೇಲೆ ಹಲ್ಲೆಗೈದಿದ್ದು, ರಾಜೇಶ್ ಪ್ರಭು ಪಿಸ್ತೂಲ್‌ನಿಂದ ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಗುಂಡು ಸುಧೀಂದ್ರನಿಗೇ ತಗುಲಿತ್ತು. ಎಡಗಣ್ಣಿನ ಹತ್ತಿರದಿಂದ ಹಾದುಹೋಗಿದ್ದ ಗುಂಡು ತಲೆಯ ಒಳಭಾಗದಲ್ಲಿ 7-8 ಇಂಚು ಆಳಕ್ಕಿಳಿದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

You may also like

Leave a Comment