Home » ಮಂಗಳೂರು : ರೈಲಿನ‌ ಮೇಲೇರಿ ಸೆಲ್ಫಿ ತೆಗೆಯುತ್ತಿದ್ದಾಗ ವಿದ್ಯುತ್ ಶಾಕ್ ,ಭಾಗಶಃ ಸುಟ್ಟು ಹೋದ ಯುವಕ

ಮಂಗಳೂರು : ರೈಲಿನ‌ ಮೇಲೇರಿ ಸೆಲ್ಫಿ ತೆಗೆಯುತ್ತಿದ್ದಾಗ ವಿದ್ಯುತ್ ಶಾಕ್ ,ಭಾಗಶಃ ಸುಟ್ಟು ಹೋದ ಯುವಕ

by Praveen Chennavara
0 comments

ಮಂಗಳೂರು : ನಿಂತಿದ್ದ ಗೂಡ್ಸ್ ರೈಲಿನ ಮೇಲೆ ಹತ್ತಿ ಸೆಲ್ಫಿ ತೆಗೆಯಲು ಹೋಗಿ ಯುವಕನೊಬ್ಬ ವಿದ್ಯುತ್ ಶಾಕ್ ಗೆ ಒಳಗಾಗಿ ಭಾಗಶಃ ಸುಟ್ಟು ಹೋಗಿ ಮೃತಪಟ್ಟ ಘಟನೆ ಸುರತ್ಕಲ್ ರೈಲ್ವೆ ಸ್ಟೇಷನ್ ನಿಲ್ದಾಣದ ಸಮೀಪದ ಅಗರಮೇಲುನಲ್ಲಿ ಮಂಗಳವಾರ ಸಂಜೆ ನಡೆದಿದೆ.

ಸಲಾನ್ ಪಾರಸ್ (21) ಅವಘಡಕ್ಕೆ ಬಲಿಯಾದ ಯುವಕ. ಸುರತ್ಕಲ್ ಕೊಂಕಣ ರೈಲ್ವೇ ನಿಲ್ದಾಣ ವಿದ್ಯುತ್ತೀಕರಣಗೊಂಡಿದ್ದು,ಕೆಳಮಟ್ಟದಲ್ಲಿ ಹೈವೋಲ್ಟೇಜ್ ತಂತಿಗಳನ್ನು ಆಳವಡಿಸಲಾಗಿದೆ. ಅಪಾಯದ ಬೋರ್ಡನ್ನು ಕೂಡ ಹಾಕಲಾಗಿತ್ತು. ನಿಂತಿದ್ದ ಗೂಡ್ಸ್ ರೈಲಿನ ಮೇಲೇರಿ ಸೆಲ್ಫಿ ತೆಗೆಯಲು ತೆರಳಿದ್ದ ಸಲಾನ್ ಹೈವೋಲ್ಟೇಜ್ ತಂತಿಗಳನ್ನು ಗಮನಿಸದೇ ಇದ್ದುದ್ದರಿಂದ ವಿದ್ಯುತ್ ಶಾಕ್ ಹೊಡೆದು ಭಾಗಶಃ ಸುಟ್ಟು ಹೋಗಿದ್ದಾನೆ.

ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

You may also like

Leave a Comment