Home » ಮಂಗಳೂರು | ಚಿಲಿಂಬಿ ಗುಡ್ಡದಲ್ಲಿ ಮುಸ್ಲಿಂ ಯುವಕನೊಂದಿಗೆ ಇಬ್ಬರು ಹಿಂದೂ ಯುವತಿಯರು ಪತ್ತೆ | ಮಾದಕ ವಸ್ತು ಸೇವನೆ, ನಾಲ್ವರನ್ನು ಪೊಲೀಸರಿಗೆ ಒಪ್ಪಿಸಿದ ಬಜರಂಗದಳದ ಕಾರ್ಯಕರ್ತರು

ಮಂಗಳೂರು | ಚಿಲಿಂಬಿ ಗುಡ್ಡದಲ್ಲಿ ಮುಸ್ಲಿಂ ಯುವಕನೊಂದಿಗೆ ಇಬ್ಬರು ಹಿಂದೂ ಯುವತಿಯರು ಪತ್ತೆ | ಮಾದಕ ವಸ್ತು ಸೇವನೆ, ನಾಲ್ವರನ್ನು ಪೊಲೀಸರಿಗೆ ಒಪ್ಪಿಸಿದ ಬಜರಂಗದಳದ ಕಾರ್ಯಕರ್ತರು

0 comments

ಬಜರಂಗದಳದ ಕಾರ್ಯಕರ್ತರ ಕಾರ್ಯಾಚರಣೆ ವೇಳೆ ಮುಸ್ಲಿಂ ಯುವಕನೊಂದಿಗೆ ಹಿಂದೂ ಯುವತಿಯರು ಪತ್ತೆಯಾದ ಘಟನೆ ಮಂಗಳೂರು ಹೊರವಲಯದ ಗುರುಪುರದ ಚಿಲಿಂಬಿ ಎಂಬಲ್ಲಿ ನಡೆದಿದೆ.

ಚಿಲಿಂಬಿ ಎಂಬಲ್ಲಿಯ ಗುಡ್ಡದಲ್ಲಿ ಒಬ್ಬ ಹಿಂದೂ ಯುವಕ ಹಾಗೂ ಮುಸ್ಲಿಂ ಯುವಕನೊಂದಿಗೆ ಇಬ್ಬರು ಹಿಂದೂ ಯುವತಿಯರು ಪತ್ತೆಯಾಗಿದ್ದು, ಇವರು ಬಳಸಿದ್ದ ಕಾರ್‌ಗೆ ನಂಬರ್ ಪ್ಲೇಟ್ ಇಲ್ಲದಿರುವುದು ಅನುಮಾನ ಮೂಡಿಸಿದೆ.

ಪತ್ತೆಯಾದ ನಾಲ್ವರನ್ನೂ ಬಜೈ ಪೋಲಿಸ್ ಠಾಣೆಯ ಪೋಲಿಸರಿಗೆ ಒಪ್ಪಿಸಲಾಗಿದೆ. ವಿಚಾರಣೆ ನಡೆಸಿದಾಗ ಅವರ ಜೊತೆಗಿದ್ದ ಓರ್ವಳು ಬಾಲಕಿ ಎಂಬುದಾಗಿ ತಿಳಿದುಬಂದಿದೆ. ಇನ್ನು ಯುವಕರನ್ನು ಡ್ರಗ್ಸ್ ಟೆಸ್ಟ್ ಗೆ ಒಳಪಡಿಸಲಾಗಿದ್ದು, ಡ್ರಗ್ಸ್ ಟೆಸ್ಟ್ ನಲ್ಲಿ ಪಾಸಿಟಿವ್ ರಿಪೋರ್ಟ್ ಬಂದಿದೆ. ಬಾಲಕಿ ಮನೆಯವರು ನೀಡಿದ ದೂರಿನ ಆಧಾರದ ಮೇಲೆ ಎಕೋನಾಮಿಕ್ ಅಂಡ್ ನಾರ್ಕೋಟಿಕ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.

ಘಟನೆಯ ಹಿಂದೆ ಗಾಂಜಾ ಮಾಫಿಯಾದ ಶಂಕೆ ವ್ಯಕ್ತವಾಗಿದ್ದು, ಉನ್ನತ ತನಿಖೆ ನಡೆಸುವಂತೆ ಬಜರಂಗದಳದ ನಾಯಕರು ಆಗ್ರಹಿಸಿದ್ದಾರೆ.

You may also like

Leave a Comment