Home » ಮಂಗಳೂರು : ಜೀಪು ಡಿಕ್ಕಿ ಹೊಡೆದು ನೆಲ್ಯಾಡಿಯ ವ್ಯಕ್ತಿ ಸಾವು

ಮಂಗಳೂರು : ಜೀಪು ಡಿಕ್ಕಿ ಹೊಡೆದು ನೆಲ್ಯಾಡಿಯ ವ್ಯಕ್ತಿ ಸಾವು

0 comments

ಜೀಪು ಢಿಕ್ಕಿ ಹೊಡೆದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಮಂಗಳೂರಿನ ಬೈಕಂಪಾಡಿಯಲ್ಲಿ ನಡೆದಿದೆ.

ಗೋಳಿತೊಟ್ಟು ಶಾಂತಿನಗರ ನಿವಾಸಿ ರವೀಂದ್ರ ಆಚಾರಿ (40) ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ. ಇವರು ಮಂಗಳೂರಿನಲ್ಲಿ ಲಾರಿಯೊಂದರಲ್ಲಿ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಶುಕ್ರವಾರದಂದು ರಾತ್ರಿ ವೇಳೆ ಬೈಕಂಪಾಡಿ ಸಮೀಪ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಜೀಪು ಡಿಕ್ಕಿ ಹೊಡೆದು, ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

You may also like

Leave a Comment