Home » ಮಂಜೇಶ್ವರ: ಕಳವು ಪ್ರಕರಣದ ಮೂವರು ಆರೋಪಿಗಳ ಬಂಧನ

ಮಂಜೇಶ್ವರ: ಕಳವು ಪ್ರಕರಣದ ಮೂವರು ಆರೋಪಿಗಳ ಬಂಧನ

by Praveen Chennavara
0 comments

ಕಾಸರಗೋಡು: ಉಪ್ಪಳದ ಜುವೆಲ್ಲರಿಯಿಂದ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂರು ಮಂದಿ ಆರೋಪಿಗಳನ್ನು ಡಿವೈಎಸ್ಪಿ ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.

ಉಪ್ಪಳದ ಎಸ್.ಎಸ್ ಗೋಲ್ಡ್ ನಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತರನ್ನು ತಮಿಳುನಾಡು ನಾಮಕ್ಕಲ್ ನ ವೇಲಾಯುಧನ್ (46), ಕೊಯಮುತ್ತೂರಿನ ಸೈದಾಲಿ (49) ಮತ್ತು ರಾಜನ್ (51) ಎಂದು ಗುರುತಿಸಲಾಗಿದೆ.

2020ರ ನವಂಬರ್ ಆರರಂದು ಕೃತ್ಯ ನಡೆದಿತ್ತು. ಬೀಗ ಮುರಿದು ಒಳನುಗ್ಗಿದ ಆರೋಪಿಗಳು 65 ಗ್ರಾಂ ಚಿನ್ನಾಭರಣ ಹಾಗೂ ಎರಡು ಕಿಲೋ ಬೆಳ್ಳಿಯ ಆಭರಣಗಳನ್ನು ಕಳವು ಮಾಡಲಾಗಿತ್ತು. ಇವರು ಅಂತಾರಾಜ್ಯ ದರೋಡೆಕೋರರ ತಂಡದವರು ಎಂದು ಪೊಲೀಸರು ತಿಳಿಸಿದ್ದಾರೆ.

You may also like

Leave a Comment