6
Shimoga: ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ದಾಳಿಗೆ ಹತ್ಯೆಯಾದ ಮಂಜುನಾಥ್ ರಾವ್ ಪಾರ್ಥಿವ ಶರೀರ ಗುರುವಾರ ಬೆಳಗ್ಗೆ 9 ಗಂಟೆಗೆ ಶಿವಮೊಗ್ಗಕ್ಕೆ ಬರಲಿದೆ. ಮಧ್ಯಾಹ್ನ 12.30 ವರೆಗೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಪ್ರಮುಖ ಬೀದಿಗಳಲ್ಲಿ ಅಂತಿಮ ಯಾತ್ರೆ ನಡೆಯಲಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ತಿಳಿಸಿದರು.
ಪ್ರಹ್ಲಾದ್ ಜೋಷಿ ಆಗಮಿಸಲಿದ್ದು, ಅನಂತರ ಅಂತ್ಯ ಸಂಸ್ಕಾರ ನಡೆಯಲಿದೆ. ಮಂಜುನಥ್ ನಿಧನಕ್ಕೆ ಸಂತಾಪ ಸೂಚಿಷಿ ಅರ್ಧ ದಿನ ಶಿವಮೊಗ್ಗ ಬಂದ್ ಮಾಡಲು ವರ್ತಕರು, ಹೋಟೆಲ್ ಮಾಲಕರು ತೀರ್ಮಾನ ಮಾಡಿದ್ದಾರೆ ಎಂದು ಹೇಳಿದರು.
