Home » Central Government : ಮನ್ಮೋಹನ್ ಸಿಂಗ್ ಅಂತ್ಯಕ್ರಿಯೆ ಸ್ಥಳದ ವಿಚಾರ – ಕುಟುಂಬದ ಈ ಮನವಿಯನ್ನು ತಿರಸ್ಕರಿಸಿದ ಕೇಂದ್ರ !!

Central Government : ಮನ್ಮೋಹನ್ ಸಿಂಗ್ ಅಂತ್ಯಕ್ರಿಯೆ ಸ್ಥಳದ ವಿಚಾರ – ಕುಟುಂಬದ ಈ ಮನವಿಯನ್ನು ತಿರಸ್ಕರಿಸಿದ ಕೇಂದ್ರ !!

4 comments

Central Government : ದೇಶದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆ ಇಂದು ದೆಹಲಿಯಲ್ಲಿ ನೆರವೇರಲಿದೆ. ಅವರ ಅಂತ್ಯಕ್ರಿಯೆ ನೆರವೇರಿಸುವ ಕುರಿತು ಸಿಂಗ್ ಕುಟುಂಬದವರ ಸಲ್ಲಿಸಿದ ಮನವಿಯನ್ನು ಇದೀಗ ಕೇಂದ್ರ ಸರ್ಕಾರ ತಿರಸ್ಕರಿಸಿದೆ.

ಹೌದು, ಸ್ಮಾರಕವನ್ನು ನಿರ್ಮಾಣ ಮಾಡಲು ಸಾಧ್ಯವಾಗುವ ಸ್ಥಳದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆ ನೆರವೇರಿಸಬೇಕು ಎಂಬ ಸಿಂಗ್ ಅವರ ಕುಟುಂಬದ ಮನವಿಯನ್ನು ಕೇಂದ್ರ ಸರಕಾರ ತಿರಸ್ಕರಿಸಿದೆ ಎಂದು ಶಿರೋಮಣಿ ಅಕಾಲಿ ದಳದ ನಾಯಕ ಸುಖ್‌ಬೀರ್ ಸಿಂಗ್ ಬಾದಲ್ ಶುಕ್ರವಾರ ತಿಳಿಸಿದ್ದಾರೆ.

ಇನ್ನು ಸಿಂಗ್ (Manmohan Singh Funeral) ಅವರ ಅಂತ್ಯಕ್ರಿಯೆಯು ಶನಿವಾರ 28 ಡಿಸೆಂಬರ್ 2024 ರಂದು ಬೆಳಿಗ್ಗೆ 11:45 ಕ್ಕೆ ನಿಗಮಬೋಧ್ ಘಾಟ್‌ನಲ್ಲಿ ನಡೆಯಲಿದೆ ಇಂದು ಮಾಹಿತಿ ಬಂದಿದೆ. ಅವರ ಪಾರ್ಥಿವ ಶರೀರವನ್ನು ಶನಿವಾರ ಬೆಳಗ್ಗೆ ಪಕ್ಷದ ಪ್ರಧಾನ ಕಚೇರಿಯಲ್ಲಿ ಜನರ ಅಂತಿಮ ದರ್ಶನಕ್ಕಾಗಿ ಇರಿಸಲಾಗುವುದು ಮತ್ತು ನಂತರ ಅವರ ಅಂತಿಮ ಯಾತ್ರೆಯು ಅಲ್ಲಿಂದ ಬೆಳಿಗ್ಗೆ 9.30 ಕ್ಕೆ ಪ್ರಾರಂಭವಾಗಲಿದೆ ಎಂದು ಹೇಳಲಾಗಿದೆ.

You may also like

Leave a Comment