Home » Karnataka Bandh: ಮಾ. 22 ಕರ್ನಾಟಕ ಬಂದ್ – ‘ಕರವೇ’ ಯಿಂದ ಇಲ್ಲ ಬೆಂಬಲ, ಬೇರೆ ಯಾವೆಲ್ಲ ಕನ್ನಡಪರ ಸಂಘಟನೆಗಳು ಬೆಂಬಲಿಸಿವೆ?

Karnataka Bandh: ಮಾ. 22 ಕರ್ನಾಟಕ ಬಂದ್ – ‘ಕರವೇ’ ಯಿಂದ ಇಲ್ಲ ಬೆಂಬಲ, ಬೇರೆ ಯಾವೆಲ್ಲ ಕನ್ನಡಪರ ಸಂಘಟನೆಗಳು ಬೆಂಬಲಿಸಿವೆ?

0 comments

Karnataka Bandh: ಮಹಾರಾಷ್ಟ್ರದಲ್ಲಿ ಕನ್ನಡಿಗರಿಗೆ ಹಾಗೂ ಕರ್ನಾಟಕ ಬಸ್ ಗಳು ಮತ್ತು ಸಿಬ್ಬಂದಿಗಳ ಮೇಲೆ ನಡೆಯುತ್ತಿರುವಂತಹ ನಿರಂತರ ದಬ್ಬಾಳಿಕೆಯನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು, ಕರ್ನಾಟಕ ಬಂದ್ ಗೆ ಕರೆ ನೀಡಿವೆ. ಮಾರ್ಚ್ 22ರಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಬಂದ್ ಗೆ ಕರೆ ನೀಡಲಾಗಿದೆ. ಅಚ್ಚರಿಯೇನೆಂದರೆ ಕರ್ನಾಟಕ ರಕ್ಷಣಾ ವೇದಿಕೆ( ನಾರಾಯಣಗೌಡ ಬಣ)ಯಿಂದ ಈ ಬಂದ್ ಗೆ ಯಾವ ಬೆಂಬಲವು ಸಿಕ್ಕಿಲ್ಲ. ಹಾಗಿದ್ರೆ ಬೇರೆ ಯಾವೆಲ್ಲ ಕನ್ನಡಪರ ಸಂಘಟನೆಗಳು ಬೆಂಬಲಿಸಿವೆ? ಇಲ್ಲಿದೆ ನೋಡಿ ಮಾಹಿತಿ.

 

ಫಿಲಂ ಚೇಂಬರ್ ಬೆಂಬಲ:

ಬೆಳಗಾವಿಯಲ್ಲಿ ಕರ್ನಾಟಕ ಸಾರಿಗೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವುದು, ಕನ್ನಡಿಗರಿಗೆ ಅಪಮಾನ ಮಾಡಿ ಮರಾಠಿಗರು ದೌರ್ಜನ್ಯ ಮೆರೆದಿದ್ದಾರೆ. ಕನ್ನಡಪರ ಸಂಘಟನೆಗಳು ಮಾರ್ಚ್ 22ರಂದು ರಾಜ್ಯ ಬಂದ್‌ಗೆ ಕರೆ ನೀಡಿವೆ. ಇದಕ್ಕೆ ತಾವು ಬೆಂಬಲಿಸುವುದಾಗಿ ಫಿಲ್ಮ್ ಚೇಂಬರ್ ಅಧ್ಯಕ್ಷ ಎಂ.ನರಸಿಂಹಲು ಶುಕ್ರವಾರ ತಿಳಿಸಿದೆ.

 

ಆಟೋ ಸಂಘದಿಂದ ಬೆಂಬಲ:

ಈಗಾಗಲೇ ರಾಜ್ಯ ಆಟೋ ಯೂನಿಯನ್ ವಾಟಾಳ್ ನಾಗಾರಾಜ್ ಅವರ ಕರೆಗೆ ಓಗೊಟ್ಟು ಬಂದ್‌ಗೆ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.

 

ಕರವೇ ಪ್ರವೀಣ್ ಶೆಟ್ಟಿ ಬಣದಿಂದ ಬೆಂಬಲ:

ಬೆಳಗಾವಿಯಲ್ಲಿ ಮಹಾರಾಷ್ಟ್ರ ಪುಂಡರ ದಬ್ಬಾಳಿಕೆಗೆ ಅಂತ್ಯ ಹಾಡಬೇಕಿದೆ. ಸರ್ಕಾರ ಸದರಿ ಘಟನೆ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಬೇಕು. ಕನ್ನಡ ನೆಲದಲ್ಲಿ ಕನ್ನಡಿಗರ ಮೇಲಿನ ದೌರ್ಜನ್ಯ ಖಂಡನೀಯ ಎಂದರು. ಬಂದ್ ವೇಳೆ ನಮ್ಮ ಬಣದಿಂದ ಹೋರಾಟ ನಡೆಸುವುದಾಗಿ ಪ್ರವೀಣ್ ಶೆಟ್ಟಿ ಅವರು ಪ್ರತಿಕ್ರಿಯಿಸಿದ್ದಾರೆ.

ಕರವೇ ನಾರಾಯಣಗೌಡ ಬಣದಿಂದ ಇಲ್ಲ ಬೆಂಬಲ:

ಕರ್ನಾಟಕ ಬಂದ್‌ಗೆ ಸದ್ಯ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ನಾರಾಯಣ ಗೌಡ ಬಣದಿಂದ ಬೆಂಬಲ ಇಲ್ಲ ಎನ್ನಲಾಗುತ್ತಿದೆ. ಈಗಾಗಲೇ ಕರ್ನಾಟಕ ಲೋಕಸೇವಾ ಆಯೋಗದ ಲೋಪದೋಷ ವಿಚಾರವಾಗಿ ಅಭ್ಯರ್ಥಿಗಳ ಪರವಾದ ಹೋರಾಟದಲ್ಲಿ ಪಾಲ್ಗೊಂಡಿದ್ದೇವೆ. ಸಾವಿರಾರು ಅಭ್ಯರ್ಥಿಗಳ ಭವಿಷ್ಯ ಇದರಲ್ಲಿ ಅಡಗಿದೆ. ಹೀಗಾಗಿ ಬಂದ್‌ಗೆ ಬೆಂಬಲ ನೀಡಿಲ್ಲ ಎನ್ನಲಾಗಿದೆ.

You may also like