Karnataka Bandh: ಮಹಾರಾಷ್ಟ್ರದಲ್ಲಿ ಕನ್ನಡಿಗರಿಗೆ ಹಾಗೂ ಕರ್ನಾಟಕ ಬಸ್ ಗಳು ಮತ್ತು ಸಿಬ್ಬಂದಿಗಳ ಮೇಲೆ ನಡೆಯುತ್ತಿರುವಂತಹ ನಿರಂತರ ದಬ್ಬಾಳಿಕೆಯನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು, ಕರ್ನಾಟಕ ಬಂದ್ ಗೆ ಕರೆ ನೀಡಿವೆ. ಮಾರ್ಚ್ 22ರಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಬಂದಿಗೆ ಕರೆ ನೀಡಲಾಗಿದೆ. ಈ ದಿನ ಶಾಲೆಗಳಿಗೆ ರಜೆ ಇರುತ್ತದೆಯ ಎಂಬುದು ಇದೀಗ ಹುಟ್ಟಿಕೊಂಡ ಪ್ರಶ್ನೆ. ಇಲ್ಲಿದೆ ನೋಡಿ ಉತ್ತರ.
ಶಾಲಾ- ಕಾಲೇಜುಗಳಿಗೆ ರಜೆ ಇರುತ್ತಾ?
ಈಗಾಗಲೇ ಮಾರ್ಚ್ 22ರಂದು ಕರ್ನಾಟಕ ಬಂದ್ ಗೆ ಕನ್ನಡ ಪರ ಸಂಘಟನೆಗಳು ಕರೆ ನೀಡಿವೆ. ಕರೆ ನೀಡಿದ ಬೆನ್ನಲ್ಲೇ ಭಾರಿ ಬೆಂಬಲ ವ್ಯಕ್ತವಾಗಿದೆ. ಆಟೋ ಸಂಘಟನೆಗಳು ಕೂಡಾ ಬಂದ್‌ಗೆ ಬೆಂಬಲ ನೀಡಿದೆ. ಸರ್ಕಾರಿ ಸಾರಿಗೆಗಳು ರೋಡಿಗೆ ಇಳಿಯಬಾರದು ಎಂದೂ ಕರೆ ನೀಡಲಾಗಿದೆ. ಆದ್ದರಿಂದ ಬಂದ್ ದಿನ ಸಾರಿಗೆ ಸೌಲಭ್ಯವೂ ಸಿಗೋದು ಬಹುತೇಕ ಡೌಟ್ ಎಂದು ಹೇಳಲಾಗಿದೆ. ಇನ್ನು ಶಾಲಾ-ಕಾಲೇಜುಗಳು ಓಪನ್ ಇರುತ್ತಾ? ಇಲ್ವಾ? ಎಂದು ಸ್ಷಷ್ಟನೆ ಇಲ್ಲ. ಆದ್ರೆ ಮುಂದಿನ ದಿನಗಳಲ್ಲಿ ಈ ಬಗ್ಗೆ ಆದೇಶ ಹೊರಡಿಸಬಹುದು.
ಏನಿರುತ್ತೆ?
ಮಾರ್ಚ್ 22 ರಂದು ಹಾಲು, ತರಕಾರಿ, ಮೆಡಿಕಲ್, ಆಯಂಬುಲೆನ್ಸ್ ಸೇವೆ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಸೌಲಭ್ಯವನ್ನು ಒದಗಿಸುತ್ತದೆ ಎಂದು ಹೇಳಲಾಗಿದೆ.
