Home » ಮರ್ದಾಳ: ಕಲ್ಲಿನ ಕ್ವಾರೆ ಕುರಿತಂತೆ ಜಿಲ್ಲಾಧಿಕಾರಿಗೆ ದೂರು ಹಿನ್ನಲೆ | ಕಂದಾಯ ಅಧಿಕಾರಿಗಳಿಂದ ಭೇಟಿ, ಪರಿಶೀಲನೆ

ಮರ್ದಾಳ: ಕಲ್ಲಿನ ಕ್ವಾರೆ ಕುರಿತಂತೆ ಜಿಲ್ಲಾಧಿಕಾರಿಗೆ ದೂರು ಹಿನ್ನಲೆ | ಕಂದಾಯ ಅಧಿಕಾರಿಗಳಿಂದ ಭೇಟಿ, ಪರಿಶೀಲನೆ

by Praveen Chennavara
0 comments

ಕಡಬ :ಕಡಬ ತಾಲೂಕಿನ ಮರ್ದಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಂಟ್ರ ಗ್ರಾಮದ ಕುಂಡಡ್ಕ ಎಂಬಲ್ಲಿ ಪುನರಾರಂಭಿಸಲು ಉದ್ದೇಶಿಸಿರುವ ಕಪ್ಪು ಕಲ್ಲಿನ ಕ್ವಾರೆಗೆ ಸ್ಥಳೀಯರು ಆಕ್ಷೇಪಿಸಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿರುವ ಹಿನ್ನಲೆಯಲ್ಲಿ ಕಡಬ ಕಂದಾಯ ಅಧಿಕಾರಿಗಳು ಬುಧವಾರ ಪರಿಸರದ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.

ಕಡಬ ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ ನೇತೃತ್ವದಲ್ಲಿ ಮರ್ದಾಳ ಗ್ರಾಮ ಲೆಕ್ಕಾಧಿಕಾರಿ ಶ್ರುತಿ, ಗ್ರಾಮ ಸಹಾಯಕ ಶಶಿಧರ, ಲಿಂಗಪ್ಪ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿ ಸುಮಾರು 11 ಮನೆಗಳಿಗೆ ಭೇಟಿ ನೀಡಿದ ಅಧಿಕಾರಿಗಳು ನಾಗರಿಕರ ಪರ ಹಾಗೂ ವಿರೋಧಗಳನ್ನು ಪಡೆದು ದಾಖಲಿಸಿಕೊಂಡರು.

You may also like

Leave a Comment