ಮದುವೆ ನಿಶ್ಚಿತಾರ್ಥ ಆದ ಮೂರೇ ದಿನಕ್ಕೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಕುಂದಲಗುರ್ಕಿಯಲ್ಲಿ ನಡೆದಿದೆ.
ಶಿಡ್ಲಘಟ್ಟ ತಾಲೂಕಿನ ಕುಂದಲಗುರ್ಕಿ ನಿವಾಸಿ ಮುನಿಕೃಷ್ಣ ಎಂಬಾತ ವಿಷ ಕುಡಿದು ಸಾವಿಗೆ ಶರಣಾದ ಯುವಕ. ಬಿಎಸ್ಸಿ ಪದವೀಧರನಾಗಿದ್ದ ಮುನಿಕೃಷ್ಣ, ಚಿಂತಾಮಣಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಮೂರು ದಿನಗಳ ಹಿಂದೆ ಮುನಿಕೃಷ್ಣಗೆ ಗುಂಡಿಬಂಡೆ ತಾಲೂಕಿನ ಹುಡುಗಿ ಜೊತೆ ನಿಶ್ಚಿತಾರ್ಥ ಮಾಡಲಾಗಿತ್ತು. ಆದರೆ, ನಿಶ್ಚಿತಾರ್ಥ ಆದ ಮೂರೇ ದಿನಕ್ಕೆ ಮುನಿಕೃಷ್ಣ ಸಾವಿನ ಮನೆ ಸೇರಿದ್ದಾನೆ.
ಯುವಕ ಆತ್ಮಹತ್ಯೆಗೂ ಮುನ್ನ ರಕ್ತದಲ್ಲಿ ಪ್ರೇಯಸಿಗೆ ಪತ್ರ ಬರೆದಿದ್ದು, ಪ್ರೇಮ ಪತ್ರದುದ್ದಕ್ಕೂ ಸ್ಸೋರಿ..ಐ ಲವ್ ಯು ಸಾಲುಗಳೇ ಹೆಚ್ಚಾಗಿವೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಈ ಪ್ರಕರಣದ ಕುರಿತು ಸಂಪೂರ್ಣ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.
