Home » ಮದುವೆಯಾಗಿ ಎರಡು ಮಕ್ಕಳ ತಂದೆಯ ಅನೈತಿಕ ಸಂಬಂಧ | ಪ್ರೇಯಸಿ ಫೋನ್ ಕರೆ ಸ್ವೀಕರಿಸದ ಕಾರಣ ಆಕೆಯ ಮನೆಮುಂದೆ ಹೋಗಿ ಹೀಗೆ ಮಾಡಿದ!!!

ಮದುವೆಯಾಗಿ ಎರಡು ಮಕ್ಕಳ ತಂದೆಯ ಅನೈತಿಕ ಸಂಬಂಧ | ಪ್ರೇಯಸಿ ಫೋನ್ ಕರೆ ಸ್ವೀಕರಿಸದ ಕಾರಣ ಆಕೆಯ ಮನೆಮುಂದೆ ಹೋಗಿ ಹೀಗೆ ಮಾಡಿದ!!!

0 comments

ಈ ಜಗತ್ತಿನಲ್ಲಿ ಪ್ರೀತಿಗಿರುವಷ್ಟು ಮಹತ್ವ ಜನ ಬೇರೆ ಯಾವುದಕ್ಕೂ ಕೊಡೋದಿಲ್ಲ ಅನ್ಸುತ್ತೆ. ಪ್ರೀತಿಗಾಗಿ, ಪ್ರೀತಿಯಿಂದ, ಪ್ರೀತಿಗೋಸ್ಕರ ಬದುಕಿದವರು ತುಂಬಾ ಜನ ಇದ್ದಾರೆ. ನ್ಯಾಯಯುತವಾದ ದಾರಿಯಲ್ಲಿ. ಆದರೆ ಕೆಲವೊಂದು ಅನೈತಿಕ ಸಂಬಂಧದ ಪ್ರೀತಿ ನೀರಿನ ಮೇಲಿನ ಗುಳ್ಳೆಯಂತೆ. ಅದು ನಿರ್ಮಲ ಪ್ರೀತಿಯಾದರೂ ಅದರ ಆಯಸ್ಸು ಕಡಿಮೆ. ಅಂತಹುದೇ ಒಂದು ಪ್ರೀತಿಯಿಂದ ನಡೆದ ಒಡೆದು ಹೋದ ಘಟನೆಯ ಬಗ್ಗೆ ನಾವಿಲ್ಲಿ ಹೇಳ ಹೊರಟಿದ್ದೀವಿ.

ಪ್ರೀತಿ ಏನೆಲ್ಲಾ ರಾಧಾಂತಗಳನ್ನು ಸೃಷ್ಟಿಸುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಪ್ರೇಯಸಿ ಫೋನ್ ಕಾಲ್ ತೆಗಿಯಲಿಲ್ಲ ಎಂಬ ಒಂದೇ ಒಂದು ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದು ಮೂರ್ಖತನದ ಪರಮಾವಧಿ ಅಂದರೂ ತಪ್ಪಾಗಲಾರದು.

ಹೌದು, ಹೊಸಕೋಟೆ ತಾಲೂಕಿನ ಡಿ ಹೊಸಹಳ್ಳಿ ಗ್ರಾಮದ ರಾಜು ಮದುವೆಯಾಗಿದ್ದು, ಎರಡು ಮಕ್ಕಳ ತಂದೆ. ಆದರೂ ಬೇರೊಬ್ಬ ಹೆಂಗಸಿನ ಜೊತೆ ಪ್ರೀತಿ-ಪ್ರೇಮದ ಆಟ ನಡೆಸುತ್ತಿದ್ದ. ಕಳೆದರೆಡು ವರ್ಷಗಳಿಂದ ಅವರ ನಡುವೆಯಿದ್ದ ಸ್ನೇಹ ಪ್ರೀತಿಯಾಗಿ ಬದಲಾಗಿತ್ತು.

ಈ ಮಹಾಶಯ ಇತ್ತೀಚಿಗೆ ಪ್ರೇಯಸಿಯೊಂದಿಗೆ ಜಗಳ ಮಾಡಿಕೊಂಡಿದ್ದ. ನಂತರ ರಾಜಿ ಮಾಡಿಕೊಳ್ಳಲು ಅವಳ ಮನೆಗೆ ಹೋಗಿದ್ದನು. ಆದರೆ ಆಕೆ ಯಾವುದೇ ಪ್ರತಿಕ್ರಿಯೆ ನೀಡದೆ, ಅವನನ್ನು ಕ್ಯಾರೆ ಮಾಡಲಿಲ್ಲ. ಆಮೇಲೆ ಪೋನ್ ಕರೆಯ ಮೂಲಕ ಪ್ರೇಯಸಿಯನ್ನು ಸಂಪರ್ಕಿಸಲು ಪ್ರಯತ್ನಿಸಿದಾಗಲೂ ಆಕೆ ಸ್ಪಂದಿಸಿಲ್ಲ. ಇದರಿಂದ ಹತಾಷನಾದ ರಾಜು ಅವಳ ಮನೆ ಮುಂದೆಯೇ ನೇಣು ಬಿಗಿದುಕೊಂಡು ಸತ್ತಿದ್ದಾನೆ.

You may also like

Leave a Comment