Maruti Suzuki : ದೇಶದ ಅತಿ ದೊಡ್ಡ ಕಾರು ಕಂಪನಿಗಳಲ್ಲಿ ಒಂದಾಗಿರುವ ಮಾರುತಿ ಸುಜುಕಿ ತನ್ನ ಗ್ರಾಹಕರನ್ನು ಸಂತೋಷವಾಗಿಡಿಸಲು ಕಡಿಮೆ ಬೆಲೆಗೆ, ಭರ್ಜರಿ ಫೀಚರ್ ಗಳನ್ನು ಹೊಂದಿರುವ ಕಾರುಗಳನ್ನು ಮಾರುಕಟ್ಟೆಗೆ ಲಾಂಚ್ ಮಾಡಿದೆ. ಅದರಲ್ಲಿ ಮಾರುತಿ ಸುಸುಕಿ ಸ್ವಿಫ್ಟ್ (Maruti Suzuki Swift), ದಶಕಗಳಿಂದ ವಿಶ್ವಾಸಾರ್ಹ ಹ್ಯಾಚ್‌ಬ್ಯಾಕ್ ಆಗಿದೆ. ಇದು ಅತ್ಯಾಧುನಿಕವಾದ ವಿನ್ಯಾಸವನ್ನು ಹೊಂದಿದ್ದು, ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಅಲ್ಲದೆ ಇದೀಗ ಬೈಕ್ ನಂತೆ ಬರೋಬ್ಬರಿ 32 ಕಿ. ಮೀ ಮೈಲೇಜ್ ಹೊಂದಿದ್ದು ಗ್ರಾಹಕರನ್ನು ಸೆಳೆಯುತ್ತಿದೆ.
ಹೌದು, ಕೈಗೆಟುಕುವ ಬೆಲೆಯ ಈ ಕಾರನ್ನು ಗ್ರಾಹಕರು ನಾ ಮುಂದು – ತಾ ಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಈ ಸೆಪ್ಟೆಂಬರ್ ತಿಂಗಳಲ್ಲೂ ಉತ್ತಮ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಒಟ್ಟು 15,547 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಣೆ ಮಾಡಲಾಗಿದೆ.
ಕಾರಿನ ಬೆಲೆ – ಕನಿಷ್ಠ ರೂ.5.79 ಲಕ್ಷ ಹಾಗೂ ಗರಿಷ್ಠ ರೂ.8.80 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ.
ಬಣ್ಣ – ಎಲ್‌ಎಕ್ಸ್‌ಐ, ವಿಎಕ್ಸ್‌ಐ, ವಿಎಕ್ಸ್‌ಐ (ಒ), ಝಡ್‌ಎಕ್ಸ್‌ಐ ಮತ್ತು ಝಡ್‌ಎಕ್ಸ್‌ಐ ಪ್ಲಸ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.
ಮೈಲೇಜ್: ಮತ್ತೊಂದು 1.2-ಲೀಟರ್ ಸಿಎನ್‌ಜಿ ಎಂಜಿನ್, 70 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 102 ಎನ್‌ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಕೇವಲ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 32.85 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ
ಇತರೆ ವಿಶೇಷತೆಗಳು :
ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಡಿಆರ್‌ಎಲ್‌ಗಳು, ಎಲ್‌ಇಡಿ ಫಾಗ್ ಲೈಟ್‌ಗಳು, ಎಲ್‌ಇಡಿ ಟೈಲ್‌ಲೈಟ್‌ಗಳು ಮತ್ತು 15 ಇಂಚಿನ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. ಪರ್ಲ್ ಆರ್ಕ್ಟಿಕ್ ವೈಟ್, ಸಿಜ್ಲಿಂಗ್ ರೆಡ್ ಮೆಟಾಲಿಕ್, ಸ್ಪ್ಲೆಂಡಿಡ್ ಸಿಲ್ವರ್, ಲಸ್ಟರ್ ಬ್ಲೂ, ನಾವೆಲ್ ಆರೆಂಜ್ & ಬ್ಲೂಯಿಶ್ ಬ್ಲ್ಯಾಕ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ.
ಇದನ್ನೂ ಓದಿ:Raju Talikote: ನಟ, ಹಿರಿಯ ರಂಗ ಕಲಾವಿದ ರಾಜು ತಾಳಿಕೋಟೆ ನಿಧನ
ನೂತನ ‘ಸ್ವಿಫ್ಟ್’ ಪ್ರಯಾಣಿಕರ ಸುರಕ್ಷತೆಗೂ ಹೆಸರುವಾಗಿದೆ. ಅದಕ್ಕಾಗಿ 6 ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿ – ಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಟಿಸಿಎಸ್ (ಟ್ರಾಕ್ಷನ್ – ಕಂಟ್ರೋಲ್ ಸಿಸ್ಟಮ್), ಸೀಟ್ ಬೆಲ್ಟ್ ರಿಮೈಂಡರ್ ಹಾಗೂ 3 ಪಾಯಿಂಟ್ ಸೀಟ್‌ಬೆಲ್ಟ್‌ನಂತಹ ಹಲವು ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಹೊಂದಿದೆ.
