Maruti Suzuki: ಕೇಂದ್ರ ಸರ್ಕಾರವು ಜಿಎಸ್‌ಟಿ ಪರಿಷ್ಕರಣಿಯನ್ನು ನಡೆಸಿದ್ದು, ಹಲವು ಅಗತ್ಯ ವಸ್ತುಗಳ ಬೆಲೆಯಲ್ಲಿ ವ್ಯತ್ಯಾಸ ಉಂಟಾಗಿದೆ. ಈಗಾಗಲೇ ಕಾರು ಮತ್ತು ಮೊಬೈಲ್ ಕಂಪನಿಗಳು ತಮ್ಮ ಬೆಲೆ ವ್ಯತ್ಯಾಸವನ್ನು ಘೋಷಿಸಿಕೊಂಡಿವೆ. ಇತ್ತೀಚಿಗೆ ಮಾರುತಿ ಸುಜುಕಿ ಕೂಡ ತಡವಾಗಿ ತನ್ನ ಬೆಲೆ ಇಳಿಕೆ ದರವನ್ನು ಘೋಷಿಸಿಕೊಂಡಿದ್ದು ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ ನೀಡಿತ್ತು. ಈ ಬೆನ್ನಲ್ಲೇ ಸೆಪ್ಟೆಂಬರ್ 22ರಂದು ಜಿ ಎಸ್ ಟಿ ಕಡಿತದ ದರ ಜಾರಿಯದ ಬಳಿಕ ಬರೋಬ್ಬರಿ ಬರೀ ಮೂವತ್ತು ಸಾವಿರ ಮಾರುತಿ ಕಾರುಗಳು ಮಾರಾಟವಾಗಿದೆ ಎಂಬ ಮಾಹಿತಿ ಬಂದಿದೆ.
ಹೌದು, ಭಾರತದ ಅಗ್ರಮಾನ್ಯ ವಾಹನ ತಯಾರಕರಾದ ಮಾರುತಿ ಸುಜುಕಿಯ 30,000 ಕಾರುಗಳು ಸೆಪ್ಟೆಂಬರ್ 22ರಂದು ಮಾರಾಟವಾಗಿರುವ ಅಂದಾಜು ಇದೆ ಎನ್ನಲಾಗಿದೆ. ಮಾರುತಿ ಸುಜುಕಿಯ ಡೀಲರ್ಗಳು ನಿನ್ನೆ ಸೋಮವಾರ ಒಂದೇ ದಿನ 80,000 ಗ್ರಾಹಕರು ವಿಚಾರಿಸಿರುವುದು ದಾಖಲಾಗಿದೆ. ಸಣ್ಣ ಕಾರುಗಳಿಗೆ ಹೆಚ್ಚಿನ ಡಿಮ್ಯಾಂಡ್ ಬಂದಿದೆ. ಆಟೊಮೊಬೈಲ್ ಡೀಲರ್ಗಳ ಒಕ್ಕೂಟವಾದ ಎಫ್ಎಡಿಎ ಸೋಮವಾರ ದೊಡ್ಡ ಸಂಖ್ಯೆಯಲ್ಲಿ ಜನರು ಶೋರೂಮುಗಳಿಗೆ ಬಂದು ಹೋಗಿದ್ದಾರೆ ಎಂದು ಹೇಳಿದೆ.
ಜಿಎಸ್‌ಟಿ ಕಡಿತದ ಬಳಿಕ ಮಾರುತಿ ಸುಜುಕಿ ಕಾರುಗಳ ಆರಂಭಿಕ ಬೆಲೆ (ಎಕ್ಸ್ ಶೋ ರೂಂ)
ಮಾರುತಿ ಸುಜುಕಿ ಅಲ್ಟೋ : 3,69,900 ರೂ ( 1,07,600 ರೂ ಕಡಿತ
ಮಾರುತಿ ಸುಜುಕಿ ವ್ಯಾಗನ್‌ಆರ್ : 4,98,900 ರೂ ( 79,600 ರೂ ಕಡಿತ)
ಮಾರುತಿ ಸುಜುಕಿ ಇಗ್ನಿಸ್ : 5,35,100 ರೂ ( 71,300 ರೂ ಕಡಿತ)
ಮಾರುತಿ ಸುಜುಕಿ ಸ್ವಿಫ್ಟ್ : 5,78,900 ರೂ ( 84,600 ರೂ ಕಡಿತ)
ಮಾರುತಿ ಸುಜುಕಿ ಬಲೆನೋ: 5,98, 900 ರೂ ( 86,100 ರೂ ಕಡಿತ)
ಮಾರುತಿ ಸುಜುಕಿ ಡಿಸೈರ್: 6,25,600 ರೂ (87,700 ರೂ ಕಡಿತ)
ಮಾರುತಿ ಸುಜುಕಿ ಫ್ರಾಂಕ್ಸ್ : 6,84,900 ರೂ (1,12,600 ರೂ ಕಡಿತ)
ಮಾರುತಿ ಸುಜುಕಿ ಬ್ರೆಜಾ : 8,25,900 ರೂ ( 1,12,700 ರೂ ಕಡಿತ)
ಹೊಸ ಆರಂಭಿಕ ಬೆಲೆಗಳೊಂದಿಗೆ “ಐಷಾರಾಮಿ ಕಾರುಗಳ” ಮಾದರಿವಾರು ಪಟ್ಟಿ ಇಲ್ಲಿದೆ:
1) ಗ್ರ್ಯಾಂಡ್ ವಿಟಾರಾ: ₹10,76,500 (₹1,07,000 ವರೆಗೆ ಅಗ್ಗ)
2)ಜಿಮ್ನಿ: ₹12,31,500 (₹51,900 ವರೆಗೆ ಅಗ್ಗ)
3)ಎರ್ಟಿಗಾ: ₹8,80,000 (₹46,400 ವರೆಗೆ ಅಗ್ಗ)
4)XL6: ₹11,52,300 (₹52,000 ವರೆಗೆ ಅಗ್ಗ)
5)ಇನ್ವಿಕ್ಟೋ: ₹24,97,400 (₹61,700 ವರೆಗೆ ಅಗ್ಗ)
