Home » Mass Suicide: ಒಂದೇ ಕುಟುಂಬ 7 ಮಂದಿ ಸಾಮೂಹಿಕ ಆತ್ಮಹತ್ಯೆ! ಕಾರಣವೇನು ಗೊತ್ತೇ?

Mass Suicide: ಒಂದೇ ಕುಟುಂಬ 7 ಮಂದಿ ಸಾಮೂಹಿಕ ಆತ್ಮಹತ್ಯೆ! ಕಾರಣವೇನು ಗೊತ್ತೇ?

by Mallika
1 comment
Mass Suicide

Mass Suicide: ಆಘಾತಕಾರಿ ಘಟನೆಯೊಂದರಲ್ಲಿ ಒಂದೇ ಕುಟುಂಬದ ಏಳು ಮಂದಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ಗುಜರಾತ್‌ನ ಸೂರತ್‌ನ ಸಿದ್ದೇಶ್ವರ ಅಪಾರ್ಟ್‌ಮೆಂಟ್‌ವೊಂದರಲ್ಲಿ ನಡೆದಿದೆ. ಈ ಕುರಿತು ಪೊಲೀಸರು ಮಾಹಿತಿ ನೀಡಿದ್ದಾರೆ.

ಮನೀಶ್‌ ಸೋಲಂಕಿ ಎಂಬಾತ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದು, ಹಾಗೂ ಆತನ ಪೋಷಕರು ಪತ್ನಿ, ಮೂವರು ಮಕ್ಕಳು ಸೇರಿ, ಕುಟುಂಬದ ಇತರ ಸದಸ್ಯರು ವಿಷ ಸೇವಿಸಿದ್ದಾರೆ ಎಂದು ಶಂಕೆ ವ್ಯಕ್ತವಾಗಿದೆ.

ಒಂದೇ ಕುಟುಂಬದ ಏಳು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆ ಪತ್ರ ಬರೆದಿದ್ದಾರೆ. ಅದನ್ನು ಪರಿಶೀಲಿಸುತ್ತಿದ್ದು, ಹಣದ ಸಮಸ್ಯೆಯಿಂದ ಈ ರೀತಿ ಮಾಡಲಾಗಿದೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಕಂಡು ಬರುತ್ತಿದೆ. ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಸೂರತ್‌ನ ಡಿಸಿಪಿ ರಾಕೇಶ್‌ ಬರೋಟ್‌ ಅವರು ತಿಳಿಸಿದ್ದಾರೆ.

ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ವರದಿಯಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷೆ ಮಾಡಲಾಗುತ್ತಿದೆ.

 

ಇದನ್ನು ಓದಿ: Bank Employees Salary Hike: ಬ್ಯಾಂಕ್‌ ನೌಕರರಿಗೆ ಬಂಪರ್‌ ಗಿಫ್ಟ್‌!!! ವೇತನದಲ್ಲಿ 15% ಹೆಚ್ಚಳ, ಐದು ದಿನ ಕೆಲಸ – IBA ಪ್ರಸ್ತಾಪ

You may also like

Leave a Comment