Home » Kerala: ದೇವರ ಉತ್ಸವದಲ್ಲಿ ಭಾರೀ ಬೆಂಕಿ ಅವಘಡ; ಪಟಾಕಿ ಸಿಡಿತಕ್ಕೆ 150ಕ್ಕೂ ಅಧಿಕ ಮಂದಿಗೆ ಗಾಯ

Kerala: ದೇವರ ಉತ್ಸವದಲ್ಲಿ ಭಾರೀ ಬೆಂಕಿ ಅವಘಡ; ಪಟಾಕಿ ಸಿಡಿತಕ್ಕೆ 150ಕ್ಕೂ ಅಧಿಕ ಮಂದಿಗೆ ಗಾಯ

0 comments

Kerala: ಕೇರಳದ ಕಾಸರಗೋಡಿನ ದೇವಸ್ಥಾನದ ಉತ್ಸವದ ಸಂದರ್ಭದಲ್ಲಿ ಪಟಾಕಿ ಸಿಡಿತ ಮಾಡಲಾಗಿದ್ದು, ಆದರೆ ಈ ಸಂದರ್ಭದಲ್ಲಿ ಬೆಂಕಿ ಹತ್ತಿಕೊಂಡು 150 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.

ಈ ಘಟನೆ ಕೇರಳದ ಕಾಸರಗೋಡು ಜಿಲ್ಲೆಯ ನೀಲೇಶ್ವರಂ ದೇವಸ್ಥಾನದ ಉತ್ಸವದಲ್ಲಿ ಸೋಮವಾರ ತಡರಾತ್ರಿ ನಡೆದಿದೆ. ಪಟಾಕಿ ಸಿಡಿಸುವ ಸಂದರ್ಭದಲ್ಲಿ 150 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಇದರಲ್ಲಿ ಎಂಟು ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಟಾಕಿ ಸಿಡಿತ ಉಂಟಾದ ವೀರರ್ಕಾವು ದೇವಸ್ಥಾನದ ಬಳಿಯ ಪಟಾಕಿ ಸಂಗ್ರಹಾಗಾರಕ್ಕೆ ಬೆಂಕಿ ತಗುಲಿದ್ದು ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಅವಘಡ ನಡೆದ ಸ್ಥಲದಲ್ಲಿ ತೀವ್ರ ಗಾಯಗೊಂಡವನ್ನು ಕಾಸರಗೋಡು, ಕಣ್ಣೂರು, ಮಂಗಳೂರಿನ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ.

ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ಮುಖ್ಯಸ್ಥರು ಸೇರಿ ಜಿಲ್ಲಾಡಳಿತದ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ರಕ್ಷಣೆ ಒದಗಿಸುವ ತ್ವರಿಗ ಕೆಲಸ ಮಾಡಿದ್ದಾರೆ.

You may also like

Leave a Comment