Home » ಇಹಲೋಕ ತ್ಯಜಿಸಿದ ಮಾತಾ ಅಮೃತಾನಂದಮಯಿ ಅವರ ತಾಯಿ

ಇಹಲೋಕ ತ್ಯಜಿಸಿದ ಮಾತಾ ಅಮೃತಾನಂದಮಯಿ ಅವರ ತಾಯಿ

0 comments

ಅಧ್ಯಾತ್ಮ ಮತ್ತು ಸಮಾಜಸೇವೆಯಲ್ಲಿ, ಮಂಚೂಣಿಯಲ್ಲಿರುವ ‘ಕೊಚ್ಚಿ’ಯ ‘ಮಾತಾ ಅಮೃತಾನಂದಮಯಿ’ ಅವರ ತಾಯಿ ದಮಯಂತಿ (97) ಅವರು ನಿಧನರಾಗಿದ್ದಾರೆ.

ಮಾತಾ ಅಮೃತಾನಂದಮಯಿ ಅವರ ತಾಯಿ ಸೋಮವಾರ ಮಧ್ಯಾಹ್ನ 2.50ರ ಸುಮಾರಿಗೆ ಕೊಲ್ಲಂನ ಅಮೃತಪುರಿ ಆಶ್ರಮದಲ್ಲಿ ಕೊನೆಯುಸಿರೆಳೆದಿದ್ದಾರೆ. ದಮಯಂತಿ ಅವರು ಕೊಲ್ಲಂನ ಅಮೃತಪುರಿ ಎಡಮ್ಮನ್ನೆಲ್‍ನ ದಿವಂಗತ ಸುಗುಣಂದನ್ ಅವರ ಪತ್ನಿಯಾಗಿದ್ದು, ಇದೀಗ ಕಸ್ತೂರಿ ಭಾಯಿ, ಸುಭಗನ್, ಸುಗುಣಮ್ಮ, ಸಜಿನಿ, ಸುರೇಶ್ ಕುಮಾರ್, ಸತೀಶ್ ಕುಮಾರ್ ಮತ್ತು ಸುಧೀರ್ ಕುಮಾರ್ ಅವರ ಇತರ ಮಕ್ಕಳನ್ನು ಅಗಲಿದ್ದಾರೆ. ಇವರ ಅಂತ್ಯಕ್ರಿಯೆ ಮಂಗಳವಾರ ಸಂಜೆ 4 ಗಂಟೆಗೆ ಅಮೃತಪುರಿಯಲ್ಲಿ ಅಂತ್ಯಕ್ರಿಯೆ ನೆರವೇರಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಅಮೃತಾನಂದಮಯಿ ದೇವಿಯ ಪ್ರೀತಿಯ ತಾಯಿ ದಮಯಂತಿ ಅಮ್ಮನವರ ನಿಧನದ ಸುದ್ದಿಯಿಂದ ದುಃಖವಾಗಿದೆ. ಅವರ ಅಗಲಿಕೆ ನನ್ನ ಸಂತಾಪ. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

You may also like

Leave a Comment