Home » ಮತಾಂತರವಾಗಿದ್ದ 21 ಕುಟುಂಬಗಳನ್ನು ಮತ್ತೆ ಹಿಂದೂ ಧರ್ಮಕ್ಕೆ ಘರ್ ವಾಪಾಸಿ ಮಾಡಿದ ವಿಶ್ವ ಹಿಂದೂ ಪರಿಷತ್

ಮತಾಂತರವಾಗಿದ್ದ 21 ಕುಟುಂಬಗಳನ್ನು ಮತ್ತೆ ಹಿಂದೂ ಧರ್ಮಕ್ಕೆ ಘರ್ ವಾಪಾಸಿ ಮಾಡಿದ ವಿಶ್ವ ಹಿಂದೂ ಪರಿಷತ್

by Praveen Chennavara
0 comments

ಗುಜರಾತ್‌ನ ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಘರ್ ವಾಪಸಿ ಕಾರ್ಯಕ್ರಮದಲ್ಲಿ ಧರ್ಮಪುರ ಮತ್ತು ಕಪ್ರದ ತಾಲೂಕುಗಳ 21 ಕುಟುಂಬಗಳು ಮತ್ತೆ ಮಾತೃಧರ್ಮ ಹಿಂದೂ ಧರ್ಮಕ್ಕೆ ಮರಳಿವೆ.

ಈ ಕುಟುಂಬ‌ಗಳು ಹಲವು ಆಮಿಷಗಳಿಗೆ ಬಲಿಯಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರ‌ವಾಗಿದ್ದವು. ಇದೀಗ ವಾಪಿಯ ಬಾಪಾ ಸೀತಾರಾಮ್ ಆಶ್ರಮದಲ್ಲಿ ಈ ಕುಟುಂಬಗಳು ಮತ್ತೆ ಹಿಂದೂ ಧರ್ಮಕ್ಕೆ ಮರಳಿವೆ.

ಈ ಕುರಿತು ಬಿಜೆಪಿ ಶಾಸಕ ಕನುಭಾಯ್ ದೇಸಾಯಿ ಮಾತನಾಡಿದ್ದು, ವಿಹಿಂಪ ಆಯೋಜಿಸಿದ್ದ ಹಿಂದೂ ಜಾಗರಣ್ ಮಂಚ್ ಕಾರ್ಯಕ್ರಮ‌ದಲ್ಲಿ ಹಿಂದೂ ಸಮಾಜಕ್ಕೆ ಸಂಬಂಧಿಸಿದಂತೆ ಹಲವು ವಿಚಾರ‌ಗಳ ಚರ್ಚೆ ನಡೆದಿದೆ. ಹಾಗೆಯೇ ಬಲವಂತ‌ದ ಧಾರ್ಮಿಕ ಮತಾಂತರ ವಿರುದ್ಧ ಸರ್ಕಾರ ಜಾರಿಗೊಳಿಸಿರುವ ಕಾನೂನುಗಳ ಬಗೆಗೂ ಜಾಗೃತಿ ಮೂಡಿಸುವ ಕುರಿತು ಚರ್ಚೆ ನಡೆಸಲಾಗಿದೆ ಎಂದು ಹೇಳಿದ್ದಾರೆ.

You may also like

Leave a Comment