Home » Mathura: ಚೇಂಬರ್‌ ವಿವಾದಕ್ಕೆ ಜಗಳ: ಮಹಿಳಾ ವಕೀಲರ ಫೈಟ್‌, ವಿಡಿಯೋ ವೈರಲ್

Mathura: ಚೇಂಬರ್‌ ವಿವಾದಕ್ಕೆ ಜಗಳ: ಮಹಿಳಾ ವಕೀಲರ ಫೈಟ್‌, ವಿಡಿಯೋ ವೈರಲ್

0 comments

Mathura: ಉತ್ತರ ಪ್ರದೇಶದ ಮಥುರಾದಲ್ಲಿ ಶುಕ್ರವಾರ (ಜುಲೈ 18) ಚೇಂಬರ್‌ ವಿವಾದಕ್ಕೆ ಸಂಬಂಧಪಟ್ಟಂತೆ ಇಬ್ಬರು ಮಹಿಳಾ ವಕೀಲರ ನಡುವೆ ಜಗಳ ನಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಇಬ್ಬರು ವಕೀಲರು ಹೊಡೆದಾಟದಲ್ಲಿ ತೊಡಗಿದ್ದು, ಕೈ ಕೈ ಮಿಲಾಯಿಸಿ ಕೂದಲು ಹಿಡಿದು ನೆಲದ ಮೇಲೆ ಎಳೆಯುತ್ತಿರುವ ವೀಡಿಯೋ ವೈರಲ್‌ ಆಗಿದೆ. ಯಾರೂ ಈ ಸಂದರ್ಭದಲ್ಲಿ ಜಗಳ ಬಿಡಿಸಲು ಹೋಗದಿರುವುದು ಈ ವೀಡಿಯೋದಲ್ಲಿ ಕಂಡು ಬಂದಿದೆ.

ನ್ಯಾಯಾಲಯದ ಆವರಣದ ಬಳಿಯ ಸಾದರ್‌ ಬಜಾರ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ವಕೀಲರ ನಡುವೆ ಚೇಂಬರ್‌ ವಿವಾದಕ್ಕೆ ಸಂಬಂಧಪಟ್ಟಂತೆ ಈ ಘಟನೆ ನಡೆದಿದೆ ಎನ್ನಲಾಗಿದೆ.

You may also like