Belagavi: ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಸೂರಜ್ ಎಂಬಾತ ತಮ್ಮ ಮನೆಯ ತಾರಸಿ ಮೇಲೆ ಕೆಂಪು ಕಾರೊಂದನ್ನು ನಿಲ್ಲಿಸಿದ್ದು, ಅದೀಗ ಸೆಲ್ಫಿ ತಾಣವಾಗಿದೆ.
ಸೂರಜ್ ಎಂಬಾತ ಐಟಿಐ ಓದಿದ್ದು, ಮಹಾರಾಷ್ಟ್ರದಲ್ಲಿ 4 ವರ್ಷ ದುಡಿದು, ಅನಂತರ ಊರಿಗೆ ಬಂದು ಚಿಕ್ಕದೊಂದು ಗ್ಯಾರೇಜ್ ತೆರೆದು 12 ವರ್ಷವಾಗಿದೆ. ಊರಿಗೆ ಬಂದಾಗ ಆತ ಗ್ಯಾರೇಜ್ ಜೊತೆಗೆ ಈ ಕೆಂಪು ಬಣ್ಣ ಮಾರುತಿ 800 ಕಾರ್ ಖರೀದಿಸಿ ವಾಹನ ಚಾಲನೆ ತರಬೇತಿಯನ್ನು ನೀಡಲು ಪ್ರಾರಂಭಿಸಿದ ನಂತರ ಆರ್ಥಿಕವಾಗಿ ಸಬಲರಾಗುತ್ತಾರೆ.
ಪ್ರಸ್ತುತ ಅವರ ಐದು ಕಾರುಗಳಿದ್ದು, ಮೂರು ಅಂತಸ್ತಿನ ಮನೆಯನ್ನು ಕಟ್ಟಿದ್ದಾರೆ. ಹೀಗಾಗಿ ಆ ಕಾರನ್ನು ದೇವರೆಂದು ಪೂಜಿಸುವ ಅವರು ಕ್ರೇನ್ ಸಹಾಯದಿಂದ ತಮ್ಮ ಮನೆ ಮೇಲೆ ಇರಿಸಿದ್ದಾರೆ. ಇನ್ನೂ 2022 ರಲ್ಲಿ ಮೇಲೆ ಇರಿಸಿದ್ದು, ಪ್ರತಿ ಹುಣ್ಣಿಮೆ ಹಾಗೂ ಅಮಾವಾಸ್ಯೆಯಂದು ಪೂಜಿಸುತ್ತಾರಂತೆ.
ಮುಂಭಾಗದ ಚಕ್ರಗಳು ಕಾಣುವಂತೆ ಕೆಳ ಮುಖ ಮಾಡಿ ಕಾರ್ ನಿಲ್ಲಿಸಿದ್ದು, ಇದೀಗ ನೋಡುಗರು ಸೆಲ್ಫಿ ಕ್ಲಿಕ್ಕಿಸುವ ತಾಣವನ್ನಾಗಿ ಮಾಡಿಕೊಂಡಿದ್ದಾರೆ.
