Home » ಅಂತಿಮ ವರ್ಷದ ವೈದ್ಯ ವಿದ್ಯಾರ್ಥಿನಿ ಆತ್ಮಹತ್ಯೆ. ಪ್ರಿಯಕರನ ಬಂಧನ.

ಅಂತಿಮ ವರ್ಷದ ವೈದ್ಯ ವಿದ್ಯಾರ್ಥಿನಿ ಆತ್ಮಹತ್ಯೆ. ಪ್ರಿಯಕರನ ಬಂಧನ.

0 comments

ಅಂತಿಮ ವರ್ಷದ ವೈದ್ಯ ವಿದ್ಯಾರ್ಥಿನಿ ಆತ್ಮಹತ್ಯೆ. ಪ್ರಿಯಕರನ ಬಂಧನ.

ಉಳ್ಳಾಲ: ಖಾಸಗಿ ವಸತಿ ಸಂಕೀರ್ಣ ದಲಿದ್ದ ನಾಟೆಕಲ್ ಖಾಸಗಿ ಕಾಲೇಜೊಂದರ ಅಂತಿಮ ವರ್ಷದ ವೈದ್ಯ ವಿದ್ಯಾರ್ಥಿನಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುತ್ತೂರು ಬಳಿ ನಡೆದಿದೆ.

ಬೀದರ್ ಆನಂದ ನಗರದ ನಿವಾಸಿ ವೈಶಾಲಿ ಗಾಯಕ್ವಾಡ (25) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯಾಗಿದ್ದಾಳೆ.ಇದರ ಸಂಬಂಧ ಅವಳ ಪ್ರಿಯಕರ ಸುಜೀತ್ ನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ

.ವೈದ್ಯಕೀಯ ಕಾಲೇಜಿನಲ್ಲಿ ನಾಲ್ಕು ವರ್ಷಗಳ ಎಂಬಿಬಿಎಸ್ ಪದವಿ ಮುಗಿಸಿ ಇಬ್ಬರು ಪರೀಕ್ಷೆ ಬರುವವರಿದ್ದರು. ಇಬ್ಬರು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಆದರೆ ಕೆಲದಿನಗಳ ಹಿಂದೆ ಇಬ್ಬರ ನಡುವೆ ಸಂಶಯ ಹುಟ್ಟಿ ಇಬ್ಬರ ನಡುವೆ ಪ್ರೀತಿಯಲ್ಲಿ ಬಿರುಕು ಬಿಟ್ಟಿತ್ತು. ಇದರಿಂದ ಇಬ್ಬರು ಖಿನ್ನತೆಗೆ ಒಳಗಾಗಿದ್ದರು.

ಖಿನ್ನತೆಗೆ ಒಳಗಾದ ಸುಜಿತ್ 1 ತಿಂಗಳ ಹಿಂದೆ ತನ್ನ ಊರಿಗೆ ಮರಳಿದ್ದ.3 ದಿನಗಳ ಹಿಂದೆ ತಂದೆ ಜೊತೆಗೆ ಮಂಗಳೂರಿಗೆ ಸುಜಿತ್ ಬಂದಿದ್ದ. ಸುಜೀತ್ ನನ್ನು ಭೇಟಿಮಾಡಲು ವೈಶಾಲಿ ಹಾಗೂ ಅವಳ ಸ್ನೇಹಿತರು ಬಂದಿದ್ದರು. ಆದರೆ ಅಲ್ಲಿ ಮಾತುಕತೆ ನಡೆಸಿ ಮುಂದೆ ಇಬ್ಬರು ಪ್ರೀತಿಯಲ್ಲಿ ಮುಂದುವರೆಯದಂತೆ ತೀರ್ಮಾನಿಸಿದ್ದರು.ಇದರಿಂದ ಮನನೊಂದ ವೈಶಾಲಿ ಆತ್ಮಹತ್ಯೆಯ ನಿರ್ಧಾರವನ್ನು ಕೈಗೊಂಡಿದ್ದಾಳೆ.

ಭಾನುವಾರ ವೈಶಾಲಿ ಕುತ್ತೂರು ಜಂಕ್ಷನ್ ನಲ್ಲಿರುವ ತನ್ನ ಸಿಲಿ ಕೋನೀಯ ಅಪಾರ್ಟ್ಮೆಂಟ್ ನಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅವಳ ಫೋನ್ ಸ್ವಿಚ್ ಆಫ್ ಆಗಿರುವುದರಿಂದ ಅವಳ ಸ್ನೇಹಿತರು ಫ್ಲ್ಯಾಟಿಗೆ ಬಂದು ನೋಡಿದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.

ಸದ್ಯ ಪ್ರಿಯಕರ ಸುಜೀತ್ ನನ್ನು ವಿಚಾರಣೆ ನಡೆಸಿ ಉಳ್ಳಾಲ ಪೊಲೀಸರು ಅವನ ವಿರುದ್ಧ ಆತ್ಮಹತ್ಯೆ ಪ್ರಚೋದನೆ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.

You may also like

Leave a Comment